ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪನಡು – ಗುರುಪೂರ್ಣಮಿ…

ಬಂಟ್ವಾಳ: ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪನಡು ಇಲ್ಲಿ ಗುರುಪೂರ್ಣಮಿ ಪ್ರಯುಕ್ತ ಶ್ರೀ ದೇವರಿಗೆ ಫಲಪಂಚಾಮೃತ ಅಭಿಷೇಕ ವಿಶೇಷ ಪೂಜೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಶ್ರದ್ಧಾಭಕ್ತಿಯಿಂದ ಸಜೀಪ ಮಾಗಣೆಯ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳುoಜ ವೆಂಕಟೇಶ್ವರ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಆಳ್ವ, ರಾಮಕೃಷ್ಣ ಭಟ್, ಪ್ರದೀಪ್ ಶೆಟ್ಟಿ, ಕಿಶನ್, ರಾಮ, ಗಣಪತಿ ಭಟ್, ಸುಧಾಕರ್ ಕೆ ಟಿ, ಸುರೇಶ್ ಬಂಗೇರ, ಭಾಸ್ಕರ, ಪಂಚಾಯತ್ ಅಧ್ಯಕ್ಷ ವಿಠ್ಠಲ್ ಮೊದಲಾದವರು ಉಪಸ್ಥಿತರಿದ್ದರು.

Related Articles