ಬಿಜೆಪಿ ಕಾರ್ಯಕರ್ತ ದಿ.ನರೇಂದ್ರ ದೇವಾಡಿಗರ ಮನೆ ನಿರ್ಮಾಣಕ್ಕೆ ಬಂಟ್ವಾಳ ಬಿಜೆಪಿ ಕ್ಷೇಮ ನಿಧಿಯಿಂದ 3 ಲಕ್ಷ ರೂ ಹಸ್ತಾಂತರ…

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಗೋಳ್ತಮಜಲು ಗ್ರಾಮದ ನೆಟ್ಲದ 178ನೇ ಬೂತ್ ನ ಬಿಜೆಪಿ ಪೇಜ್ ಪ್ರಮುಖ್ ನರೇಂದ್ರ ದೇವಾಡಿಗ ಇವರು ಡಿ.30ರಂದು ಅಪಘಾತದಲ್ಲಿ ಮೃತಪಟ್ಟಿದ್ದು ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದ ಮೃತನ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದ ಸಂದರ್ಭದಲ್ಲಿ ಮನೆಯವರು ಮನೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದು, ಅದರಂತೆ ಬಿಜೆಪಿ ಕಾರ್ಯಕರ್ತರ ಹಾಗೂ ಊರವರ ಸಹಕಾರದಿಂದ ನೂತನ ಮನೆ ನಿರ್ಮಾಣವಾಗುತ್ತಿದ್ದು, ಇಂದು ಶಾಸಕರಾದ ರಾಜೇಶ್ ನಾಯ್ಜ್ ಅವರು ಬಂಟ್ವಾಳ ಬಿಜೆಪಿ ಕ್ಷೇಮ ನಿಧಿಯಿಂದ 3 ಲಕ್ಷ ರೂಗಳನ್ನು ಮೃತ ನರೇಂದ್ರ ದೇವಾಡಿಗರ ತಾಯಿ ಪುಷ್ಪ ದೇವಾಡಿಗರಿಗೆ ಹಸ್ತಾಂತರಿಸಿದರು.
ಅಲ್ಲದೆ ಶಾಸಕರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 3 ಲಕ್ಷ ರೂ ಮಂಜೂರಾಗಿದೆ.ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ,ಬೂಡ ಅಧ್ಯಕ್ಷರಾದ ದೇವದಾಸ ಶೆಟ್ಟಿ,ಗೋಳ್ತಮಜಲು ಪಂಚಾಯತ್ ಅಧ್ಯಕ್ಷ ಅಭಿಷೇಕ್ ಶೆಟ್ಟಿ,ಮಹಿಳಾ ಮೋರ್ಚಾದ ಪ್ರ.ಕಾರ್ಯದರ್ಶಿ ಲಖಿತಾ ಆರ್ ಶೆಟ್ಟಿ,ಗಿರೀಶ್ ಕುಲಾಲ್ ನೆಟ್ಲ ಉಪಸ್ಥಿತರಿದ್ದರು.