ಭಜನೆಯು ಸಂಸ್ಕಾರಕ್ಕೆ ಪ್ರೇರಕ – ಸೂರ್ಯ ಭಟ್ ಕಶೆಕೋಡಿ…
ಬಂಟ್ವಾಳ: ಭಜನೆಯಿಂದ ನಮ್ಮ ಮಕ್ಕಳಿಗೆ ಸಂಸ್ಕಾರ ಕಲಿಯಲು ಪ್ರೇರಣೆ ಸಿಗುತ್ತದೆ ಅದರಿಂದ ಬದುಕಿಗೆ ಬೇಕಾದ ಮನೋಧೈರ್ಯ ಬೆಳೆಯುತ್ತದೆ ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಶ್ರೀ ಸೂರ್ಯನಾರಾಯಣ ಭಟ್ ಕಶೆಕೋಡಿ ಇವರು ತಿಳಿಸಿದರು
ಅವರು ಬರಿಮಾರು ಶ್ರೀ ವಿನಾಯಕ ಶ್ರೀ ದೇವಿ ಭಜನಾ ಮಂದಿರದಲ್ಲಿ ಭಜನಾ ಮತ್ತು ಸಂಸ್ಕಾರ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಮೂಲದಲ್ಲೇ ಸಂಸ್ಕಾರ ಪಡೆಯಬೇಕು, ಇಂದಿನ ಸಮಾಜದಲ್ಲಿ ಸಂಸ್ಕಾರದ ಕೊರತೆಯಿಂದ ವಿದ್ಯಾವಂತರೆನಿಸಿದ ಜನರೇ ಸಮಾಜಘಾತುಕ ಕೆಲಸದಲ್ಲಿ ತೊಡಗಿದ್ದಾರೆ ಅದಕ್ಕಾಗಿ ಇಂತಹ ಸಂಸ್ಕಾರ ತರಬೇತಿ ಶಿಬಿರಗಳು ಅಗತ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಂದಿರದ ಅಧ್ಯಕ್ಷರಾದ ಶ್ರೀ ಜಯಂತ ಪಂಜುರ್ಲಿ ಗುಡ್ಡೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಮಹಮ್ಮಾಯಿ ಸೇವಾ ಸಮಿತಿಯ ಅಧ್ಯಕ್ಷ ಸುಧಾಕರ ಸಪಲ್ಯ, ಹಿರಿಯ ಭಜನಾಕಾರ ಗೋಪಾಲ್ ನಾಯಕ್ ಉಪಸ್ಥಿತರಿದ್ದರು.
ಭಜನಾ ತರಬೇತುದಾರ ಅಶ್ವತ್ಥ್ ಬರಿಮಾರು ಪ್ರಸ್ತಾವಿಸಿ ಭಜನಾ ತರಬೇತಿಯ ಉದ್ದೇಶಗಳನ್ನು ತಿಳಿಸಿದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಶ್ರೀಮತಿ ಗೀತಾ ಶಿವಾನಂದ ನಿರೂಪಿಸಿದರು ಗುರುರಾಜ್ ಆಳ್ವ, ಹರೀಶ್ ಪಂಜುರ್ಲಿ ಗುಡ್ಡೆ , ಶಿವಾನಂದ ಕರ್ತಕೋಡಿ ಸಹಕರಿಸಿದರು.