ಪದವಿಪೂರ್ವ ಕಾಲೇಜುಗಳ ನೌಕರರ ಸಹಕಾರ ಸಂಘ( ನಿ) ಮಂಗಳೂರು 2023- 24 ವಾರ್ಷಿಕ ಮಹಾಸಭೆ, ಶೇ. 10 ದಿವಿಡೆಂಡ್ ಘೋಷಣೆ…

ಮಂಗಳೂರು: ಪದವಿ ಪೂರ್ವ ಕಾಲೇಜುಗಳ ನೌಕರರ ಸಹಕಾರ ಸಂಘ( ನಿ) ಮಂಗಳೂರು ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಆ. 17 ರಂದು ಡಾ. ಎನ್. ಎಸ್. ಎ.ಎಂ. ಪ.ಪೂ ಕಾಲೇಜು ಸಭಾಭವನ ನಂತೂರು ಮಂಗಳೂರು ಇಲ್ಲಿ ಜರುಗಿತು.
ಸಂಘದ ಅಧ್ಯಕ್ಷ ಎನ್ ದುಗ್ಗಪ್ಪ ಮಾತನಾಡುತ್ತಾ, ಆರು ವರ್ಷಗಳ ಹಿಂದೆ ಪ.ಪೂ.ಕಾ . ನೌಕರರ ಸಹಕಾರ ಸಂಘ ಸ್ಥಾಪಿಸಲ್ಪಟ್ಟು ಇದೀಗ ಸುಮಾರು 1500 ಶಿಕ್ಷಕ ಶಿಕ್ಷಕೇತರರ ಸದಸ್ಯತ್ವವನ್ನು ಹೊಂದಿದೆ. ಸರಕಾರಿ, ಅನುದಾನಿತ, ಅನುದಾನ ರಹಿತ, , ಪ್ರಾಥಮಿಕ, ಪ್ರೌಢ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ಶಿಕ್ಷಕ ಮತ್ತು -ಶಿಕ್ಷಕೇತರರು ಕಳೆದ ಸಾಲಿನಲ್ಲಿ ಏಳು ಕೋಟಿ ರೂಪಾಯಿಗಳ ಸಾಲವನ್ನು ಪಡೆದು ಕೊಂಡಿರುತ್ತಾರೆ. ಕಳೆದ ಆರು ವರ್ಷಗಳಲ್ಲಿ ಒಟ್ಟಾರೆ 30 ಕೋಟಿ ರೂಪಾಯಿ ವ್ಯವಹಾರ ವೃದ್ಧಿ ಆಗಿದೆ. 2023-24ನೇ ಸಾಲಿನಲ್ಲಿ ಶೇ.10 ಡಿವಿಡೆಂಡ್ ನೀಡುವುದರೊಂದಿಗೆ ಸಂಘವು ಆರೋಗ್ಯಪೂರ್ಣವಾಗಿ ಬೆಳವಣಿಗೆಯನ್ನು ಕಾಣುತ್ತಾ ಇದೆ. ಮಂಗಳೂರಿನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿ ಪುತ್ತೂರು ಮತ್ತು ಕಡಬಗಳಲ್ಲಿ ಶಾಖೆಗಳನ್ನು ಹೊಂದಿರುವ ಸಂಘವು ವೈಯಕ್ತಿಕ ಸಾಲ ಜೊತೆಗೆ ಚಿನ್ನಾಭರಣ ಅಡಮಾನ ಸಾಲವನ್ನು ನೀಡುತ್ತಾ ಬಂದಿದೆ. ಮುಂದಿನ ವರ್ಷಗಳಲ್ಲಿ ಮೂಡುಬಿದಿರೆ ಮತ್ತು ತೊಕ್ಕುಟ್ಟಿನಲ್ಲಿ ತನ್ನ ಶಾಖೆಗಳನ್ನು ತೆರೆದು ಸದಸ್ಯರಿಗೆ ಸಾಲ ಸವಲತ್ತುಗಳನ್ನು ವಿಸ್ತರಿಸಲಿದೆ ಎಂದು ತಿಳಿಸಿದರು.
ಕಾರ್ಯನಿರ್ವಹಣಾ ಅಧಿಕಾರಿ ರವೀಂದ್ರ ಆಳ್ವ ಕಳೆದ ಸಾಲಿನ ವರದಿಯನ್ನು ಸಭೆಯಲ್ಲಿ
ವಾಚಿಸಿದರು. ಉಪಾಧ್ಯಕ್ಷ ಗಂಗಾಧರ ಆಳ್ವ ಸ್ವಾಗತಿಸಿದರು. ಡಾ. ಎನ್ .ಎಸ್ .ಎ. ಎಂ. ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನೆಗೈದರು.2023-24 ನೇ ಸಾಲಿನಲ್ಲಿ ಪ್ರಾಂಶುಪಾಲರಾಗಿ ಮತ್ತು ಶಿಕ್ಷಕರಾಗಿ ನಿವೃತ್ತರಾದ ಗಂಗಾಧರ ಆಳ್ವ, ಶ್ರೀಕೃಷ್ಣ ಇವರನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ಉಮೇಶ್ ಕರ್ಕೆರ ಮತ್ತು ಯುಸುಫ್ ಇವರುಗಳು ತಿಳುವಳಿಕೆ ಪತ್ರ, ಲೆಕ್ಕಪತ್ರಗಳನ್ನು ಸಭೆಯ ಮುಂದೆ ಪ್ರಸ್ತುತಪಡಿಸಿದರು. ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಜಯಾನಂದ ಸುವರ್ಣ ನಿರ್ದೇಶಕರಾದ ವಿಠಲ. ಎ ,ಶೇಖರ್ ರೈ ,ಸಂಧ್ಯಾ ಕುಮಾರಿ, ನವೀನ್ ಕುಮಾರ್,ಕಿಶೋರ್ ಕುಮಾರ್ ಮತ್ತು ಸಿಬ್ಬಂದಿ ವರ್ಗ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಹಾಗೂ ಸಂಘದ ನಿರ್ದೇಶಕರಾದ ಡಾ. ನವೀನ್ ಶೆಟ್ಟಿ ವಂದಿಸಿದರು.