ಕಲ್ಲಡ್ಕದಲ್ಲಿ 92 ನೇ ವರ್ಷದ ಮೊಸರು ಕುಡಿಕೆ ಉತ್ಸವ…
ಮನರಂಜಿಸಿದ ಟ್ಯಾಬ್ಲೋಗಳು, ಕೃಷ್ಣಲೋಕದಲ್ಲಿ ಭಾಗವಹಿಸಿದ ನೂರಾರು ಪುಟಾಣಿಗಳು...
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಮಂದಿರದ ಅಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 92ನೇ ವರ್ಷದ ಮೊಸರು ಕುಡಿಕೆ ಉತ್ಸವ ವಿಜೃಂಭಣೆಯಿಂದ ನಡೆಯಿತು. ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುದ್ದು ಕೃಷ್ಣಲೋಕ ಹಾಗೂ ಶ್ರೀ ಕೃಷ್ಣ ದೇವರ ವೈಭವ ಪೂರ್ಣ ಶೋಭಾಯಾತ್ರೆಯು ಸಾವಿರಾರು ಮಂದಿ ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ವಿಜೃಂಭಣೆಯಿಂದ ನಡೆಯಿತು. ಶ್ರೀರಾಮ ವಿದ್ಯಾ ಕೇಂದ್ರದ ಮಕ್ಕಳ ಯಶೋದೆ ಕೃಷ್ಣರ ವೇಷಗಳು ಮನರಂಜಿಸಿದವು.
ಶೋಭಾಯಾತ್ರೆಯಲ್ಲಿ ನೇತಾಜಿ ಯುವಕ ಮಂಡಲ , ವಿಶ್ವ ಹಿಂದು ಪರಿಷತ್ತ್ ಕಲ್ಲಡ್ಕ, ತ್ರಿಶೂಲ ಫ್ರೆಂಡ್ಸ್ , ಮಣಿಕಂಠ ಯುವಶಕ್ತಿ ಕುದ್ರೆಬೆಟ್ಟು ಇವರ ಟ್ಯಾಬ್ಲೋಗಳು ವಿಶೇಷ ಆಕರ್ಷಣೆಯಾಗಿದ್ದವು . ನಾಸಿಕ್ ಬ್ಯಾಂಡ್ ಸಹಿತ ವಿವಿಧ ವಾದ್ಯವೃಂದಗಳು , ಕುಣಿತ ಭಜನೆ ಶೋಭಾಯಾತ್ರೆಗೆ ವಿಶೇಷ ಮೆರುಗು ನೀಡಿತು. ಹನುಮಾನ್ ನಗರ , ನಿಟಿಲಾಪುರ ರಿಕ್ಷಾ ಪಾರ್ಕ್‍ಗಳಲ್ಲಿ ಮೊಸರು ಕುಡಿಕೆಯನ್ನು ಪಿರಮಿಡ್ ರಚಿಸಿ ಯುವಕರು ಒಡೆಯುವ ಮೂಲಕ ಸಾಹಸ ಮೆರೆದರು.
ಶ್ರೀರಾಮ ಮಂದಿರದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಬಂಟ್ವಾಳ ವಿಶ್ವ ಹಿಂದು ಪರಿಷತ್ತು ಅಧ್ಯಕ್ಷ ಪ್ರಸಾದ್ ಕುಮಾರ್ ಮಾತನಾಡಿ ಮೊಸರು ಕುಡಿಕೆ ಉತ್ಸವದ ಸಂದೇಶ ಸಾರಿದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಆಡಳಿತ ಮಂಡಳಿಯ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ , ಸುಜಿತ್ ಕೊಟ್ಟಾರಿ, ನಾಗೇಶ್ ಕಲ್ಲಡ್ಕ , ಕ. ಕೃಷ್ಣಪ್ಪ, ಹರೀಶ್ ಅಚಾರ್ಯ, ಜಯರಾಮ್ ಶೆಟ್ಟಿಗಾರ್, ಉತ್ತಮ ಪಳನೀರ್, ಕಮಲಾ ಪ್ರಭಾಕರ ಭಟ್ , ವಿದ್ಯಾಕೇಂದ್ರದ ಸಹಸಂಚಾಲಕ ರಮೇಶ್ ಎನ್. , ಪ್ರಾಂಶುಪಾಲ ಕೃಷ್ಣ ಪ್ರಸಾದ್ ಕಾಯೆರ್ ಕಟ್ಟೆ, ಸುಲೋಚನಾ ಜಿ.ಕೆ. ಭಟ್ , ದಿನೇಶ್ ಅಮ್ಟೂರು, ಮೋಹನ್ ಪಿ.ಎಸ್. , ಜನಾರ್ದನ ಬೊಂಡಾಲ, ಆನಂದ ಶಂಭೂರು ಸೇರಿದಂತೆ ಅನೇಕ ಪ್ರಮುಖ ಕಾರ್ಯಕರ್ತರು ಭಾಗವಹಿಸಿದ್ದರು.