ಸುಳ್ಯ ಸೈoಟ್ ಜೋಸೆಫ್ ಸ್ಕೂಲ್ ನಲ್ಲಿ ಈದ್ ಮಿಲಾದ್ ಆಚರಣೆ…
ಮಕ್ಕಳಲ್ಲಿ ಎಲ್ಲಾ ಧರ್ಮಗಳ ಆದರ್ಶಗಳನ್ನು ಬಿತ್ತಿದಾಗ ಪರಸ್ಪರ ಸಹೋದರತೆ ನೆಲೆ ಗೊಳ್ಳುತ್ತದೆ: ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ...
ಸುಳ್ಯ: ಸೈoಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫ ( ಸ. ಅ.) ರವರ ಜನ್ಮ ದಿನಾಚರಣೆ ಅಂಗವಾಗಿ ಈದ್ ಮಿಲಾದ್ ಕಾರ್ಯಕ್ರಮ ವಿಶಿಷ್ಟ ರೀತಿಯಲ್ಲಿ ಜರಗಿತು.
ಪ್ರಾಸ್ತಾವಿಕ ವಾಗಿ ಮಾತನಾಡಿದ ಮುಖ್ಯ ಶಿಕ್ಷಕಿ ಸಿಸ್ಟರ್ ಮೇರಿ ಸ್ಟೆಲ್ಲಾ ಮಾತನಾಡಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪ್ರತೀ ವರ್ಷ ದೀಪಾವಳಿ, ಕ್ರಿಸ್ಮಸ್ ಮತ್ತು ಈದ್ ಹಬ್ಬಗಳನ್ನು ಆಯಾ ಯ ಧರ್ಮಗಳ ಸಂಪ್ರದಾಯ ದಂತೆ ಆಚರಿಸುತ್ತೇವೆ ಇದರಿಂದ ತಮ್ಮ ತಮ್ಮ ಧರ್ಮ ಗಳನ್ನು ಅನುಸರಿಸುವುದರ ಜತೆಗೆ ಇತರ ಧರ್ಮ ಗಳನ್ನು ಗೌರವಿಸುವ ಮನೋಭಾವನೆ ಸಣ್ಣ ಪ್ರಾಯ ದಿಂದಲೇ ಬೆಳೆಯಲು ಸಾಧ್ಯ ವಾಗುತ್ತದೆ ಎಂದರು
ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಈದ್ ಸಂದೇಶ ನೀಡಿದ ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ ಮಾತನಾಡಿ ಸೈoಟ್ ಜೋಸೆಫ್ ಸ್ಕೂಲ್ ನವರು ಮಾದರಿ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡದ್ದು ಅಭಿನಂದನೀಯ.
ಪೈಗಂಬರರು ಶಿಕ್ಷ ಣಕ್ಕೆ ಹೆಚ್ಚು ಆದ್ಯತೆ ಕೊಟ್ಟವರು, ಜೀವನದುದ್ದಕ್ಕೂ ತಂದೆ ತಾಯಿ ಮತ್ತು ಗುರುಗಳಿಗೆ ಪ್ರಾರ್ಥಿಸಲು, ಗೌರವಿಸಲು ಕಲಿಸಿ ಕೊಟ್ಟವರು, ಎಲ್ಲಾ ಧರ್ಮಗಳ ತತ್ವ, ಆದರ್ಶಗಳನ್ನು ತಿಳಿದುಕೊಂಡಾಗ ಸಹೋದರತೆ ಮತ್ತು ಸೌಹಾರ್ದ ತೆ ಗಟ್ಟಿಗೊಳ್ಳುತ್ತದೆ, ಸೇವೆಯೇ ಧರ್ಮದ ಅಸ್ಮಿತೆ ಎಂದರು.
ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಮಿತಿ ಉಪಾಧ್ಯಕ್ಷೆ ಸುನಿತಾ ಮೊಂತರೊ, ಚರ್ಚ್ ಪರಿಪಾಲನಾ ಸಮಿತಿಯ ನವೀನ್ ಮಚಾದೊ ಉಪಸ್ಥಿತರಿದ್ದರು.
ಶಿಕ್ಷಕಿ ಚೇತನಾ ಕಾರ್ಯಕ್ರಮ ಸಂಯೋಜಕ ರಾಗಿ ಕಾರ್ಯ ನಿರ್ವಹಿಸಿದರು
ವಿದ್ಯಾರ್ಥಿಗಳಿoದ ಖವ್ವಾಲಿ ಗಾಯನ, ಪ್ರವಾದಿ ಪ್ರಕೀರ್ತನೆ, ಗಮನ ಸೆಳೆಯಿತು.






