ಮಾಣಿಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ…
ದುಶ್ಚಟಗಳು ಸಮಾಜವನ್ನು ಕೆಡಿಸುತ್ತವೆ.ಲ|ಜನಾರ್ದನ ಪೆರಾಜೆ...

ಬಂಟ್ವಾಳ:ವಿದ್ಯಾರ್ಥಿಗಳು ಮಾದಕ ವ್ಯಸನಗಳಿಗೆ ಬಲಿಯಾಗಬಾರದು.ದುಶ್ಟಟಗಳು ಜೀವನವನ್ನು ಹಾಳು ಮಾಡುವುದಲ್ಲದೆ ಸಮಾಜವನ್ನು ಕೆಡಿಸುತ್ತದೆ ಎಂದು ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಜನಾರ್ದನ ಪೆರಾಜೆ ಹೇಳಿದರು.
ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಖಿಲ ಕರ್ನಾಟಕ ಜನಜಾಗೃತಿ ಯೋಜನೆ ಮತ್ತು ಲಯನ್ಸ್ ಕ್ಲಬ್ ಮಾಣಿ ಇದರ ವತಿಯಿಂದ ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಜೆಸಿಐ ರಾಜ್ಯತರಬೇತುದಾರ ಜಯಾನಂದ ಪೆರಾಜೆ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಕರ್ನಾಟಕ ಹೈಸ್ಕೂಲ್ ವಿದ್ಯಾಭಿವೃದ್ಧಿ ಸಂಘದ ಸಂಚಾಲಕ ಇಬ್ರಾಹಿಂ ಕೆ.ಮಾಣಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಲಯನ್ ಸಚ್ಚಿದಾನಂದ ರೈ ಪಾಳ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಚೆನ್ನಪ್ಪ ಗೌಡ ಸ್ವಾಗತಿಸಿದರು. ಮಾಣಿವಲಯ ಸೇವಾನಿರತೆ ಆಶಾಪಾರ್ವತಿ ಪ್ರಾಸ್ತಾವಿಕ ಮಾತನಾಡಿ ತರಬೇತಿಯ ಉದ್ದೇಶ ತಿಳಿಸಿದರು. ಸಹಶಿಕ್ಷಕ ಜಯರಾಮ ಕಾಂಚನ ನಿರೂಪಿಸಿದರು.ಶಿಕ್ಷಕಿ ಶ್ಯಾಮಲಾ ವಂದಿಸಿದರು.