ಚಿಕ್ಕಮಗಳೂರು -” ನಮ್ಮ ಹೆಮ್ಮೆಯ ಯೋಧ” ಕೃತಿ ಬಿಡುಗಡೆ…

ಚಿಕ್ಕಮಗಳೂರು: ದೇಶದ ಯೋಧರು, ದೇಶವನ್ನೇ ತಮ್ಮ ದೇಹವೆಂದು ಭಾವಿಸಿ ಕಾಪಾಡುವ ಅವರ ಸೇವೆಯ ಕುರಿತ ಮಂಜುಳಾ ಹುಲ್ಲಳ್ಳಿಯವರ ಅನುವಾದಿತ ಕೃತಿ ಸಾರ್ಥಕವಾದದ್ದು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ಹೇಳಿದರು.
ಅವರು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜ್ಞಾನ ಪ್ರಕಾಶ ಭವನದಲ್ಲಿ ಮೈಸೂರು ಪ್ರಶಸ್ತ ಇಂಟರ್‌ ನ್ಯಾಷನಲ್ಸ್‌, ಜಿಲ್ಲಾ ಮಾಜಿ
ಯೋಧರ ಸಂಘ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಆಶ್ರಯದಲ್ಲಿ ಜು. 28 ರಂದು ಹಮ್ಮಿಕೊಳ್ಳಲಾಗಿದ್ದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳಾ ಹುಲ್ಲಳ್ಳಿ ಅವರ ಅನುವಾದಿತ ಕೃತಿ ನಮ್ಮ ಹೆಮ್ಮೆಯ ಯೋಧ ಮರುಮುದ್ರಣ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಯೋಧರ ಬಗ್ಗೆ ಬರೆದಿರುವ ಸಾಹಿತ್ಯ ಕರುಳು, ಹೃದಯವನ್ನು ಹಿಂಡುವಂತಿದೆ. ಬಹುದೊಡ್ಡ ಸ್ಥಾನದಲ್ಲಿದ್ದು, ಯೋಧರ ಬಗ್ಗೆ ಉತ್ತಮ ಕೃತಿ ರಚಿಸಿದ್ದಾರೆ. ಮಂಜುಳಾ ಅವರು ಸಾಹಿತ್ಯಕ್ಷೇತ್ರಕ್ಕೆ ಮಂಗಳವನ್ನು ನೀಡಿದ್ದಾರೆಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲೆಫ್ಟಿನೆಂಟ್‌ ಜನರಲ್‌ ಬಗ್ಗೆ ಬಗ್ಗವಳ್ಳಿ ಸೋಮಶೇಖರರಾಜು ಅವರು ಯೋಧರ ಕುರಿತಾಗಿ ರಚಿಸಿರುವ ಮಂಜುಳಾ ಹುಲ್ಲಳ್ಳಿ ಅವರ ಕೃತಿ ಆಸಕ್ತಿದಾಯಕವಾದದ್ದು, ಪ್ರತಿಯೊಬ್ಬರೂ ಅದನ್ನು ಕೊಂಡು ಓದಬೇಕೆಂದು ಮನವಿ ಮಾಡಿದರು.
ಯೋಧರಿಗಿರುವ ಗೌರವವನ್ನು ಪುಸ್ತಕ ಮಾಧ್ಯದ ಮೂಲಕ ಎಲ್ಲರ ಮುಂದೆ ತಂದಿರುವುದು ಹೆಮ್ಮೆ ವಿಚಾರ. ದೇಶಕ್ಕಾಗಿ ಹೋರಾಡಿದ ಅಪ್ರತಿಮ ಯೋಧರ ಬಗ್ಗೆ ಮಕ್ಕಳಿಗಾಗಿ ಕಾಮಿಕ್ಸ್‌ ರೂಪದ ಕೃತಿಗಳೂ ಬಂದಿವೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಗಳಿಸಿ ಇಂಜಿನೀಯರ್‌, ವೈದ್ಯರು ಏನು ಬೇಕಾದರೂ ಆಗಲು ಸಾಧ್ಯವಿದೆ. ಆದರೆ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅಂತಹ ಅವಕಾಶ ಸಿಕ್ಕರೆ ಅದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಕೃತಿಗಳ ಲೇಖಕಿ ಮಂಜುಳಾ ಹುಲ್ಲಳ್ಳಿ ಅವರನ್ನು ಗೌರವಿಸಲಾಯಿತು. ರಾಜಯೋಗಿನಿ ಬಿ.ಕೆ.ಭಾಗ್ಯ ಅಧ್ಯಕ್ಷತೆ ವಹಿಸಿದ್ದರು. ಸೈನಿಕ ಕಲ್ಯಾಣ ಮತ್ತು ಪುನರ್‌ವಸತಿ ಇಲಾಖೆ ಪ್ರತಿನಿಧಿ ಹೆಚ್‌.ಡಿ.ಸುರೇಶ್‌ ಸ್ವಾಗತಿಸಿದರು. ಕೃತಿಯ ಹಿಂದಿ ಆವೃತ್ತಿ ” ಹಮಾರೆ ಗೌರವ್ ಶಾಲಿ ಯೋದ್ಘಾ” ಇದರ ಅನುವಾದಕಿ ಡಾ.ಜಿ.ಎಸ್‌.ದೇವಕಿ ಪ್ರಸನ್ನ, ಭಾರತ ಸರ್ಕಾರದ ವಾರ್ತಾ ಮತ್ತು ಪ್ರಚಾರ ಸಚಿವಾಲಯದ ಉಪ ನಿರ್ದೇಶಕಿ ಡಾ.ಟಿ.ಸಿ.ಪೂರ್ಣಿಮಾ, ಜಿಲ್ಲಾ ಮಾಜಿ ಯೋಧರ ಸಂಘದ ಅಧ್ಯಕ್ಷ ಕ್ಯಾಪ್ಟನ್‌ ಸಿ.ಎಸ್‌.ಮಂಜುನಾಥ್‌, ಉಪನ್ಯಾಸಕ ಎಚ್.ಎಸ್. ಸತ್ಯನಾರಾಯಣ, ಯೋಧ ಕೆ.ವೈ.ಕಮಲೇಶಗೌಡ ಉಪಸ್ಥಿತರಿದ್ದರು.

whatsapp image 2024 07 30 at 3.33.48 pm

whatsapp image 2024 07 30 at 3.30.14 pm

whatsapp image 2024 07 30 at 3.31.37 pm

Sponsors

Related Articles

Back to top button