ಬುಧವಾರ: ದ.ಕ – 2, ಉಡುಪಿ – 61 ಕೊರೊನ ಪ್ರಕರಣಗಳು ಪತ್ತೆ…

ಮಂಗಳೂರು: ಇಂದು(ಬುಧವಾರ) ದ.ಕ ಜಿಲ್ಲೆಯಲ್ಲಿ 2, ಉಡುಪಿ ಜಿಲ್ಲೆಯಲ್ಲಿ 61 ಹಾಗೂ ಕಾಸರಗೋಡು ಜಿಲ್ಲೆಯಲ್ಲಿ 3 ಕೊರೊನ ಪ್ರಕರಣಗಳು ಪತ್ತೆಯಾಗಿದೆ.
ದ.ಕ ಜಿಲ್ಲೆಯಲ್ಲಿ ಪತ್ತೆಯಾದ 2 ಪ್ರಕರಣಗಳು ಕೂಡ ಮಹಾರಾಷ್ಟ್ರದಿಂದ ಬಂದವರದ್ದಾಗಿದೆ.
ಉಡುಪಿ ಜಿಲ್ಲೆಯಲ್ಲಿ ಇಂದು 61 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಹಾಗೆಯೇ 851 ಮಂದಿಯ ವರದಿ ನೆಗೆಟಿವ್ ಬಂದಿದೆ. ಜಿಲ್ಲೆಯಲ್ಲಿ 386 ಮಂದಿ ಸೋಂಕಿತರಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4936 ಮಂದಿಯ ವರದಿ ಸಿಗಲು ಬಾಕಿ ಇದೆ.
ಇನ್ನು ರಾಜ್ಯದಲ್ಲಿ ಇಂದು 267 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 4063ಕ್ಕೆ ಏರಿಕೆಯಾಗಿದೆ. ಕಲಬುರಗಿಯಲ್ಲಿ 106, ಉಡುಪಿಯಲ್ಲಿ 62, ಬೆಂಗಳೂರು ನಗರದಲ್ಲಿ 20, ಮಂಡ್ಯದಲ್ಲಿ 13, ಯಾದಗಿರಿಯಲ್ಲಿ 9, ರಾಯಚೂರಿನಲ್ಲಿ 35, ಹಾಸನ 1, ದಾವಣಗೆರೆಯಲ್ಲಿ 3, ವಿಜಯಪುರದಲ್ಲಿ 6, ದಕ್ಷಿಣ ಕನ್ನಡ, ಮೈಸೂರು, ಬಾಗಲಕೋಟೆ, ಶಿವಮೊಗ್ಗದಲ್ಲಿ ತಲಾ 2, ಬಳ್ಳಾರಿ, ಧಾರವಾಡದಲ್ಲಿ ತಲಾ 1, ಕೋಲಾರದಲ್ಲಿ 2, ಬೆಂಗಳೂರು ಗ್ರಾಮಾಂತರದಲ್ಲಿ 1 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 250 ಮಂದಿ ಹೊರರಾಜ್ಯಗಳಿಂದ ಆಗಮಿಸಿದವರಾಗಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button