ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ನಿಧನ- ಕಾಂಗ್ರೆಸ್ ಮುಖಂಡ ಟಿ. ಎಂ. ಶಹೀದ್ ತೆಕ್ಕಿಲ್ ಸಂತಾಪ…

ಸುಳ್ಯ: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಕಾಂಗ್ರೆಸ್ ಮುಖಂಡ ಟಿ. ಎಂ. ಶಹೀದ್ ತೆಕ್ಕಿಲ್ ತೀವ್ರ ಸಂತಾಪ ವ್ಯಕ್ತಪಡಿಸಿರುತ್ತಾರೆ.
ಆಸ್ಕರ್ ರವರು ವೈಯಕ್ತಿಕವಾಗಿ ಒಳ್ಳೆಯ ಒಡನಾಟದಲ್ಲಿದ್ದರು. ನನ್ನ ರಾಜಕೀಯ ಬೆಳವಣಿಗೆಗೆ ಸಹಕರಿಸಿದವರು. ತಮ್ಮ ಕುಟುಂಬದ ಸಮೇತ ತೆಕ್ಕಿಲ್ ಮನೆಗೆ ಅನೇಕ ಬಾರಿ ಭೇಟಿ ಕೊಟ್ಟಿದ್ದಾರೆ. ಕೊಯರ್ ಬೋರ್ಡ್ ಸದಸ್ಯ ಸ್ಥಾನ ಸಿಗಲು ಸಹಕರಿಸಿದವರು. ಕಾಂಗ್ರೇಸ್ ನ ಜನಪ್ರಿಯ ನಾಯಕರು, ನನ್ನಂತಹ ಲಕ್ಷಾಂತರ ಯುವಕರನ್ನು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಬಲಿಷ್ಠಗೊಳಿಸಿದವರು. ಅವರ ವಿಯೋಗವು ಯುವ ಜನಾಂಗಕ್ಕೆ ತುಂಬಲಾರದ ನಷ್ಟ. ಸಮಾಜದಲ್ಲಿರುವ ಏಡ್ಸ್ ರೋಗಿಗಳ, ಕುಷ್ಟ ರೋಗಿಗಳ ಹಾಗೂ ಕ್ಯಾನ್ಸರ್ ರೋಗಿಗಳ ಆರೈಕೆ ಮಾಡುತ್ತಿದ್ದರು ಹಾಗೂ ಸಂಕಷ್ಟದಲ್ಲಿದ್ದವರಿಗೆ ಆತ್ಮಸ್ಥೈರ್ಯ ನೀಡುತ್ತಿದ್ದರು. ಸರಳ ಮತ್ತು ಸಜ್ಜನಿಕೆ ಗುಣ ಹೊಂದಿದಂತಹ ನಾಯಕರಾಗಿದ್ದ ಇವರು ಅಪರೂಪದಲ್ಲಿ ಅಪರೂಪದ ರಾಜಕಾರಣಿ. ಇಂತಹ ಮಹಾ ನಾಯಕನ ನಿಧನದಿಂದ ನನ್ನಂತಹ ಅನೇಕ ಯುವಕರು ಬಡ ಆಗಿದ್ದೇವೆ. ಅವರ ಕುಟುಂಬದವರಿಗೆ, ಹಿತೈಷಿಗಳಿಗೆ ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಅಲ್ಲಾಹನು ನೀಡಲಿ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ. ಎಂ. ಶಹೀದ್ ತೆಕ್ಕಿಲ್ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

IMG 20210913 WA0029 300x225

670260 291x300 Images

Oscar 270316 11 234x300

Related Articles