ಪ್ರೊ.ಡಾ. ಕೆ.ಗೋವರ್ಧನ್ ರಾವ್ ಇವರು ‘ರಾಷ್ಟ್ರೀಯ ವಿಭೂಷಣ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ…

ಬಂಟ್ವಾಳ:ಬೆಂಗಳೂರಿನ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ (ರಿ) ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ವಿಭೂಷಣ ರಾಷ್ಟ್ರ ಪ್ರಶಸ್ತಿಗೆ ಜೋಡುಮಾರ್ಗದ ಸಮಾಜ ಸೇವಕ, ಪೋಷಕ ನಟ, ತಾರಸಿ ಗಾಡರ್ನ್ ಕೃಷಿಕ , ಬರಹಗಾರ, ರೊ.ಪ್ರೊ.ಡಾ.ಕೆ. ಗೋವರ್ಧನ್ ರಾವ್ ಇವರು ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ಪ್ರಶಸ್ತಿ ಪ್ರಧಾನ ಸಮಾರಂಭವು ಸಂಸ್ಥೆಯ 29ನೇ ವಾರ್ಷಿಕೋತ್ಸವದ ಸಮಾರಂಭದ ವೇಳೆ ಸೆ. 25 ರಂದು ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಇವರಿಗೆ ಹಲವಾರು ಪ್ರಶಸ್ತಿಗಳು ಹಾಗೂ ಡಾಕ್ಟರೇಟ್‍ಗಳು ಲಭಿಸಿವೆ. ಬೆಂಗಳೂರಿನ ಕಲಾಸಂಗಮ ರಾಜ್ಯ ಪ್ರಶಸ್ತಿ ಪ್ರಶಸ್ತಿ , ಎಂ.ವಿ.ಎಲ್.ಎ. ಎಜುಕೇಶನಲ್ ಟ್ರಸ್ಟ್ ಮುಂಬೈ ಇವರು “ಭಾರತ್‍ಜೋತಿ ಗುರು ಸಮ್ಮಾನ್ ಅವಾರ್ಡ್-2021 ಅನ್ನು ಕೊಟ್ಟು ಸನ್ಮಾನಿಸಿದ್ದಾರೆ. ವಿದೇಶದಲ್ಲಿದ್ದು ನಿವೃತ್ತರಾದ ಇವರು ಎಲ್ಲಾ ಕೇತ್ರಗಳಲ್ಲಿ ತೊಡಗಿಸಿಕೊಂಡು ತಾರಸಿ ತೋಟದಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವ ಒಲವನ್ನು ತೋರಿಸುತ್ತಿದ್ದು ವಿವಿಧ ಮಾಧ್ಯಮಗಳಲ್ಲಿ ಗುರುತಿಸಲ್ಪಟ್ಟಿದ್ದಾರೆ.
ಗೋವರ್ಧನ್ ರಾವ್ ಇವರು ಪತ್ನಿ ಶೀಮತಿ ಉಮಾ ಗೋವರ್ಧನ್ ರಾವ್, ಮಗಳು ಡಾ. ಪ್ರತೀಕ್ಷಾ ಹಾಗೂ ಮಗ ಪ್ರಜ್ವಲ್ ರವರೊಂದಿಗೆ ಬಿ.ಸಿ.ರೋಡಿನ “ಸೂರ್ಯವಂಶ” ದಲ್ಲಿ ವಾಸವಾಗಿರುತ್ತಾರೆ. ಅವರು ದಿ.ಕೆ.ಎಲ್ ರಾವ್ ಮತ್ತು ಶ್ರೀಮತಿ ಪುಷ್ಪಾವತಿ ಇವರ ಎರಡನೇ ಪುತ್ರರಾಗಿರುತ್ತಾರೆ.

Sponsors

Related Articles

Back to top button