ಅರಂತೋಡಿನಲ್ಲಿ ತೆಕ್ಕಿಲ್ ಸೋಕರ್ ಲೀಗ್ 2022 ಪುಟ್ಬಾಲ್ ಲೀಗ್ ಆವೃತ್ತಿ -4 ಉದ್ಘಾಟನಾ ಸಮಾರಂಭ…
ಸುಳ್ಯ: ಬೆಟಾಲಿಯನ್ ಎಫ್.ಸಿ.ಅರಂತೋಡು ಇದರ ಅಶ್ರಯದಲ್ಲಿ ತೆಕ್ಕಿಲ್ ಸೋಕರ್, 7 ಜನರ ಪುಟ್ಬಾಲ್ ಲೀಗ್ ಮಾದರಿಯ ಪಂದ್ಯಾಟ ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನ.13 ರಂದು ನಡೆಯಿತು.
ಪಂದ್ಯಾಟದ ಉದ್ಘಾಟನೆಯನ್ನು ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ನೆರವೇರಿಸಿ ಮಾತನಾಡಿ ಹಿಂದೆ ನಾವು ಕ್ರಿಕೆಟ್ ಆಟವನ್ನು ಆಡುತ್ತಿದ್ದೆವು. ಈಗ ಪುಟ್ಬಾಲ್ ಪಂದ್ಯಾಟಕ್ಕೆ ಯುವಕರು ಅಕರ್ಷಿತರಾಗಿದ್ದಾರೆ. ಯುವ ಮಿತ್ರರು ಅಯೋಜಿಸಿದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ.ಎಮ್.ಶಹೀದ್ ತೆಕ್ಕಿಲ್ ವಹಿಸಿ ಮಾತನಾಡಿ ಕ್ರೀಡೆಯಿಂದ ಸೌಹಾರ್ದತೆಯನ್ನು ಕಂಡು ಕೊಳ್ಳಲು ಸಾಧ್ಯವಾಗುತ್ತದೆ. ಯುವಕರ ಶ್ರಮದಿಂದ ಒಳ್ಳೆಯ ತಂಡ ರಚಿಸಿ ಪಂದ್ಯಕೂಟವನ್ನು ಅಯೋಜಿಸಿರುವುದು ಶ್ಲಾಘನೀಯ. ನಮ್ಮ ಸಹಕಾರ ಬೆಂಬಲ ಸದಾ ನಿಮ್ಮೊಂದಿಗೆ ಇದೆ. ಯುವಕರು ಕ್ರೀಡೆ ಮತ್ತು ಇತರ ಕ್ಷೇತ್ರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜಮುಖಿ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು. ಮುಖ್ಯ ಆತಿಥಿಗಳಾಗಿ ಅರಂತೋಡು ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ ,ಅರಂತೋಡು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಶ್ರಫ್ ಗುಂಡಿ, ಮಾತನಾಡಿ ಬಾಲ್ಯದ ಕ್ರೀಡೆಯ ಬಗ್ಗೆ ಸ್ಮರಿಸಿಕೊಂಡು ಸದಾ ಕ್ರೀಡೆಗೆ ಮಹತ್ವದ ಬಗ್ಗೆ ವಿವರಿಸಿ ಮಾತನಾಡಿದರು.
ಸರಕಾರಿ ಪ್ರಾಥಮಿಕ ಶಾಲಾ ಎಸ್.ಡಿ.ಎಮ್.ಸಿ.ಅಧ್ಯಕ್ಷ ಸುರೇಶ್ ಉಳುವಾರು,ತೆಕ್ಕಿಲ್ ಹೆಚ್.ಪಿ.ಗ್ಯಾಸ್ ಮೇಲ್ವಿಚಾರಕ ಧನುರಾಜ್,ಯುವ ಉದ್ಯಮಿ ಸೈಫುದ್ದೀನ್ ಪಟೇಲ್,ಮಲ್ಲಿಕಾ ಶಾಮಿಯಾನ ಮಾಲಕ ವೆಂಕಟರಮಣ ಮೇರ್ಕಜೆ,ನಿತ್ಯಾನಂದ ಚೆನ್ನಡ್ಕ,ಮುಂತಾದವರು ಉಪಸ್ಥಿತರಿದ್ದರು .
ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾದ ಸಾತ್ವಿ ಎಮ್.ವಿ. ಮಾತನಾಡಿ, ನನ್ನನು ಈ ಕಾರ್ಯಕ್ರಮಲ್ಲಿ ಸನ್ಮಾನಿಸಿ ಗೌರವಿಸಿದ ನಿಮಗೆ ಕೃತಜ್ಞತೆ ಸಲ್ಲುಸುತ್ತೇನೆ. ಹೆತ್ತವರು ಅಧ್ಯಾಪಕರ ಪ್ರೋತ್ಸಾಹದಿಂದ ನಾನು ರಾಷ್ಟ್ರ ಮಟ್ಟದಲ್ಲಿ ಆಡಲು ಅವಕಾಶ ಬಂದಿದೆ ಎಂದರು. ರಾಜ್ಯ ಮಟ್ಟದ ಪುಟ್ಬಾಲ್ ಪಂದ್ಯಾಟಕ್ಕೆ ಆಯ್ಕೆಯಾದ ಅದ್ನಾನ್ ಪಟೇಲ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ತಾಜುದ್ದೀನ್ ಅರಂತೋಡು ಸ್ವಾಗತಿಸಿ ಇಜಾಸ್ ಕಾರ್ಯಕ್ರಮ ನಿರೂಪಿಸಿದರು.ನಿಸಾರ್ ಪಾಲಡ್ಕ ವಂದಿಸಿದರು.