ಮಹಿಳಾ ಪಿಎಸ್‌ಐ ಶ್ಯಾಮಿಲಿ ಕೋವಿಡ್‌ ಸೋಂಕಿಗೆ ಬಲಿ…

ಮಂಗಳೂರು: ಪೊಲೀಸ್‌ ಇಲಾಖೆಯಲ್ಲೇ ಅತಿ ಕಿರಿಯ ಸಿಬ್ಬಂದಿಯಾಗಿದ್ದ ಮಹಿಳಾ ಪಿಎಸ್‌ಐ ಶ್ಯಾಮಿಲಿ (24) ಕೋವಿಡ್‌ ಸೋಂಕಿಗೆ ಬಲಿಯಾಗಿದ್ದಾರೆ.
2021ರ ಜನರಿ 11ರಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು. ಬಳಿಕ ಸ್ವಲ್ಪ ದಿನಗಳ ನಂತರ ರಜೆಯ ಮೇಲೆ ತಮ್ಮ ಹುಟ್ಟೂರಾದ ಕೋಲಾರಕ್ಕೆ ತೆರಳಿದ್ದರು. ಕೋವಿಡ್‌ ಸೋಂಕು ದೃಢಪಟ್ಟ ಬಳಿಕ ಮೇ 2ರಂದು ಕೋಲಾರದ ಆರ್‌ ಎಂ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು.
ಮೂಲತಃ ಕೋಲಾರ ಜಿಲ್ಲೆಯವರಾದ ಇವರು ಕೆಲವು ದಿನಗಳ ಹಿಂದೆ ಕೋವಿಡ್‌ ಸೋಂಂಕಿಗೆ ಒಳಗಾಗಿದ್ದರು. ಅವರನ್ನು ಕೋಲಾರದ ಆರ್‌ ಎಂ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು 7 ತಿಂಗಳ ಗರ್ಭಿಣಿಯಾಗಿದ್ದರು.

Sponsors

Related Articles

Back to top button