ಸಹ್ಯಾದ್ರಿ ಕಾಲೇಜಿನಲ್ಲಿ ಕೊರೊನಾ ವೈರಸ್ ತಡೆಗಟ್ಟುವಿಕೆ ಬಗ್ಗೆ ಜಾಗೃತಿ ಕಾರ್ಯಕ್ರಮ….

ಮಂಗಳೂರು: ಕೊರೊನಾ ವೈರಸ್ ಹರಡುವಿಕೆಯ ಜಾಗತಿಕ ಭೀತಿಯ ಹಿನ್ನೆಲೆಯಲ್ಲಿ, ಪ್ರಥಮ ವರ್ಷದ ಎಂಜಿನಿಯರಿಂಗ್ ಮತ್ತು ಎಂಬಿಎ ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ರೋಗ ತಡೆಗಟ್ಟುವಿಕೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ವಿದ್ಯಾರ್ಥಿ ಸಲಹೆಗಾರ ಮತ್ತು ಆರೋಗ್ಯ ಕೇಂದ್ರದ ಉಸ್ತುವಾರಿ ಅಂಕಿತ್ ಎಸ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮನ್ನು ನಡೆಸಿದರು. ವೈರಸ್ ನ ರಚನೆ, ವೈರಸ್ ಪೀಡಿತ ರೋಗದ ಗುಣ ಲಕ್ಷಣಗಳು ಮತ್ತು ತಡೆಗಟ್ಟುವಿಕೆ ಬಗ್ಗೆ ವಿವರಿಸಿದರು. ಕೊರೊನಾ ವೈರಸ್ ಗೆ ಸಂಬಂಧಿಸಿದ ನೈಜ ಮತ್ತು ನಕಲಿ ಸುದ್ದಿಗಳ ನಡುವೆ ವ್ಯತ್ಯಾಸವನ್ನೂ ಅವರು ವಿವರಿಸಿದರಲ್ಲದೆ, ವೈರಸ್ ಹರಡುವುದನ್ನು ತಡೆಯಲು ಸುರಕ್ಷಿತ ಕೈ ತೊಳೆಯುವ ತಂತ್ರಗಳನ್ನು ಕಲಿಸಿದರು.