ಗೂನಡ್ಕ ತೆಕ್ಕಿಲ್ ಮಾದರಿ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ ಆಚರಣೆ…

ಸುಳ್ಯ: ಗೂನಡ್ಕ ತೆಕ್ಕಿಲ್ ಮಾದರಿ ಶಾಲೆಯಲ್ಲಿ 74ನೇ ಗಣರಾಜ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಸಂಸ್ಥೆಯ ಆಡಳಿತಾಧಿಕಾರಿ ರಹೀಂ ಬೀಜದಕಟ್ಟೆಯವರು ಧ್ವಜಾರೋಹಣಗೈದು ಮಾತನಾಡಿ ವಿದ್ಯಾರ್ಥಿಗಳು ಸಂವಿಧಾನವನ್ನು ಗೌರವಿಸಬೇಕೆಂದು ಹಿತನುಡಿಗಳನ್ನಾಡಿದರು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ದಿನಕರ ಸಣ್ಣಮನೆ ಶುಭಹಾರೈಸಿದರು. ಶಿಕ್ಷಕರಾದ ಸಾದಿಕ್ ರವರು ಗಣರಾಜ್ಯ ಸಂದೇಶ ನುಡಿಗಳನ್ನಾಡಿದರು. ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ. ಎಂ. ಶಹೀದ್ ತೆಕ್ಕಿಲ್, ಸಾಮಾಜಿಕ ಮುಖಂಡರಾದ ತಾಜ್ ಮಹಮ್ಮದ್, ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ವಾಣಿ ಕೆ ಸ್ವಾಗತಿಸಿ, ಸಹಶಿಕ್ಷಕಿ ಸೌಮ್ಯ ಪಿ. ಬಿ. ಯವರು ವಂದಿಸಿದರು.

Sponsors

Related Articles

Back to top button