ಬರಿಮಾರು ಶ್ರೀ ವಿನಾಯಕ ಶ್ರೀದೇವಿ ಭಜನಾ ಮಂದಿರ – ಕರಸೇವಕರಿಗೆ ಸನ್ಮಾನ…

ಬಂಟ್ವಾಳ: ಬರಿಮಾರು ಶ್ರೀ ವಿನಾಯಕ ಶ್ರೀದೇವಿ ಭಜನಾ ಮಂದಿರದಲ್ಲಿ ಅಯೋಧ್ಯಾ ಶ್ರೀ ರಾಮಲಲ್ಲನ ಪ್ರತಿಷ್ಠೆ ಸಮಯದಲ್ಲಿ ಭಜನಾ ಸಂಕೀರ್ತನೆ ಮತ್ತು 1990 ರ ಅಯೋಧ್ಯೆಯ ಪ್ರಥಮ ಕಾರಸೇವೆಯಲ್ಲಿ ಭಾಗವಹಿಸಿದ ಅಶೋಕ ಕುಮಾರ್ ಪಾಪೆತ್ತಿಮಾರು ಮತ್ತು ಅಮೀತ್ ಕುಮಾರ್ ಜೈನ್ ಪಾಪೆತ್ತಿಮಾರು ಹಾಗೂ 1992 ರಲ್ಲಿ ದ್ವಿತೀಯ ಕಾರಸೇವೆಯಲ್ಲಿ ಭಾಗವಹಿಸಿದ ಸಂಕಪ್ಪ ನಾಯ್ಕ ಪಾಪೆತ್ತಿಮಾರು ಇವರನ್ನು ಮಂದಿರದ ವತಿಯಿಂದ ಮತ್ತು ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು.