ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ – ಹವಾಲ್ದಾರ್ ಕೃಷ್ಣಯ್ಯ.ಕೆ. ಅವರಿಗೆ ಸನ್ಮಾನ…

ಬಂಟ್ವಾಳ: ಬಿ.ಸಿ.ರೋಡು ಸ್ಪರ್ಶ ಕಲಾಮಂದಿರದಲ್ಲಿ ಆ. 4 ರಂದು ನಡೆದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ (ರಿ) ಕೇಂದ್ರ ಸಮಿತಿ ಹುಬ್ಬಳ್ಳಿ, ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ನಡೆದ ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಹವಾಲ್ದಾರ್ ಕೃಷ್ಣಯ್ಯ.ಕೆ.,ಮಾಜಿ ಸೈನಿಕರು ಪುತ್ತೂರು ಇವರನ್ನು ಯೋಧರಿಗೆ ನಮನ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕ.ಚು.ಸಾ.ಪ.ಹುಬ್ಬಳ್ಳಿ ರಾಜ್ಯ ಸಂಚಾಲಕರಾದ ಕೃಷ್ಣ ಮೂರ್ತಿ ಕುಲಕರ್ಣಿ, ಸಮ್ಮೇಳನಾಧ್ಯಕ್ಷರಾದ ಜಯಾನಂದ ಪೆರಾಜೆ, Snr ಆದಿರಾಜ ಜೈನ್ ಅಧ್ಯಕ್ಷರು, ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ಬಂಟ್ವಾಳ ನೇತ್ರಾವತಿ ಸಂಗಮ , ಶಾಂತಾ ಪುತ್ತೂರು, ಉಪಾಧ್ಯಕ್ಷೆ ರಾಜ್ಯ ಮಹಿಳಾ ಘಟಕ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್, ಗಂಗಯ್ಯ ಕುಲಕರ್ಣಿ ಪ್ರಧಾನ ಕಾರ್ಯದರ್ಶಿ ಕ.ಚು.ಸಾ.ಪ.ಹಾವೇರಿ ಘಟಕ, ಕಾಸರಗೋಡು ಕನ್ನಡ ಭವನದ ರೂವಾರಿ ವಾಮನ್ ರಾವ್ ಬೇಕಲ್, ಹಿರಿಯ ಸಾಹಿತಿ ವಿ.ಬಿ.ಕುಳಮರ್ವ, ವೈದ್ಯ ಸಾಹಿತಿ ಡಾ.ಸುರೇಶ್ ನೆಗಳಗುಳಿ, ಶೇಖರಗೌಡ ಪಾಟೀಲ ರಟ್ಟೀಹಳ್ಳಿ ಹಾವೇರಿ, ಡಾ.ವಾಣಿಶ್ರೀ ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ) ಕಾಸರಗೋಡು, ಗುರುರಾಜ್.ಎಂ.ಆರ್.ಕಾಸರಗೋಡು ,ಮಹಾಬಲೇಶ್ವರ ಹೆಬ್ಬಾರ್ ಮೊಡಂಕಾಪು, ಮಧುರಾ ಉಪಸ್ಥಿತರಿದ್ದರು.
ರವೀಂದ್ರ ಕುಕ್ಕಾಜೆ ಸ್ವಾಗತಿಸಿದರು.ಅಪೂರ್ವ ಕಾರಂತ್ ನಿರೂಪಿಸಿದರು.ಗಂಗಯ್ಯ ಕುಲಕರ್ಣಿ ಸನ್ಮಾನ ಪತ್ರ ವಾಚಿಸಿದರು.