ವಯನಾಡ್ ದುರಂತ – ಟಿ ಎಂ ಶಾಹಿದ್ ತೆಕ್ಕಿಲ್ ಭೇಟಿ…

ವಯನಾಡ್: ಜಿಲ್ಲೆಯ ಕಲ್ಪೆಟ್ಟ ಮೇಪ್ಪಡಿ ಗ್ರಾಮ ಪಂಚಾಯತ್ ವೆಲ್ಲರಿಪ್ಪಾರ, ಪುಮ್ಚಿರಿಮಲ, ಮುಂಡಕ್ಕಯ್, ಚೂರಿಮಲ ಪ್ರದೇಶದಲ್ಲಿ ಉಂಟಾದ ಪ್ರಾಕೃತಿಕ ದುರಂತದ ಕರಾಳ ಮುಖವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಖುದ್ದಾಗಿ ವೀಕ್ಷಿಸಿದರು.
ಸಾವಿರಾರು ಜನರ ಸಾವು,ನೋವು, ವಸತಿ ಕಳಕೊಳ್ಳಲು, ಪ್ರಾರ್ಥನ ಮಂದಿರಗಳನ್ನು, ಶಾಲೆಗಳನ್ನು, ಕಟ್ಟಡಗಳನ್ನು, ಕೃಷಿ, ಸಂಪತ್ತು ಕಳಕೊಳ್ಳಲು ಕಾರಣವಾದ ಬಂಡೆ ಕಲ್ಲುಗಳು, ಮರಗಳು ,ಮಣ್ಣು, ನೀರಿನ ಒಳಗೆ ಸಂತ್ರಸ್ತರಿಗೆ ಸಹಾಯ ಮಾಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಕೆ ಎಸ್ ಎಸ್ ಎಫ್ ವಿಖಾಯ ತಂಡ ಎಸ್ ಎಸ್ ಎಫ್ ನ ಸಾಂತ್ವನ ತಂಡ ಸಹಿತ ಹಲವಾರು ಸಂಘಟನೆಯವರು ಅವಿರತವಾಗಿ ಶ್ರಮಿಸುತ್ತಿದ್ದು ಅವರನ್ನು ಭೇಟಿಯಾಗಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಕೆಪಿಸಿಸಿ ಕಾರ್ಯಧ್ಯಕ್ಷ ಟಿ ಸಿದ್ದಿಕ್, ಸುಲ್ತಾನ್ ಬತ್ತೆರಿ ಶಾಸಕ ಐ ಸಿ ಬಾಲಕೃಷ್ಣ ಉಪಸ್ಥಿತರಿದ್ದರು.