ಅಜ್ಜಾವರ- ಝಯಿನ್ ಎಕ್ಸಲೆನ್ಸ್ ಫಾರ್ ಮಾರಲ್ ಎಜುಕೇಶನ್ ಮಹಿಳಾ ಕಾಲೇ ಜಿನ ಶಿಲಾನ್ಯಾಸ…
ಮುಸ್ಲಿಂ ಮಹಿಳೆಯರು ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡಬೇಕು -ಟಿ.ಎಂ ಶಹೀದ್ ತೆಕ್ಕಿಲ್ ಕರೆ...
ಸುಳ್ಯ:ಮುಸ್ಲಿಂ ಮಹಿಳೆಯರು ಲೌಕಿಕ ಮತ್ತು ಧಾರ್ಮಿಕ ಶಿಕ್ಷಣವನ್ನು ಪಡೆದು ಸಂಸ್ಕಾರಯುತವಾಗಿ ಬಾಳಬೇಕು ಮತ್ತು ಶಿಕ್ಷಣಕ್ಕೆ ಹೆಚ್ಚು ಹೆಚ್ಚು ಒತ್ತುಕೊಡಬೇಕು ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಹಾಗೂ ಗೂನಡ್ಕ ತೆಕ್ಕಿಲ್ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಹೇಳಿದರು. ಅವರು ಸಮಸ್ತ ನ್ಯಾಶನಲ್ ಎಜ್ಯುಕೇಶನ್ ಕೌನ್ಸಿಲ್ ನ ಅಧೀನದಲ್ಲಿ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಅಡ್ಕದಲ್ಲಿ ನಿರ್ಮಾಣಗೊಳ್ಳಲಿರುವ ಮೂರುವರೆ ಕೋಟಿ ರೂಪಾಯಿ ವೆಚ್ಚದ ನೂತನ ಝಯಿನ್ ಎಕ್ಸಲೆನ್ಸ್ ಫಾರ್ ಮಾರಲ್ ಎಜುಕೇಶನ್ ಮಹಿಳಾ ಕಾಲೇಜು ಕಟ್ಟಡದ ಶಿಲಾನ್ಯಾಸ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಅಜ್ಜಾವರದಂತಹ ಗ್ರಾಮೀಣ ಪ್ರದೇಶದಲ್ಲಿ ಸುತ್ತುಮುತ್ತಲಿನ ಹೆಣ್ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಲು ಒಂದೇ ಸೂರಿನಡಿಯಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣಕ್ಕಾಗಿ ಸಂಸ್ಥೆಯೊಂದನ್ನು ಸ್ಥಾಪಿಸುತ್ತಿರುವುದು ಮತ್ತು ಸಮಸ್ತ ನ್ಯಾಷನಲ್ ಎಜುಕೇಶನಲ್ ಕೌನ್ಸಿಲ್ ಉದ್ದೇಶ ಕೂಡ ಶ್ಲಾಘನೀಯ ಎಂದರು. ಇದೇ ಸಂಧರ್ಭದಲ್ಲಿ ಅರಂತೋಡು ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಕಟ್ಟಡ ಕಾಮಗಾರಿಗೆ 1 ಲಕ್ಷ ರೂಪಾಯಿ ಧನ ಸಹಾಯವನ್ನು ಘೋಷಿಸಿದರು. ಝಯಿನ್ ಎಕ್ಸಲೆನ್ಸ್ ಫಾರ್ ಮಾರಲ್ ಎಜುಕೇಶನ್ ಮಹಿಳಾ ಕಾಲೇಜು ಕಟ್ಟಡಕ್ಕೆ ಜಿಪ್ರಿ ಮುತ್ತುಕೋಯ ತಂಗಳ್ ರವರಿಂದ ಶಿಲಾನ್ಯಾಸ ನೆರವೇರಿಸಿದರು.
ಅತಿಥಿಗಳಾಗಿ ಕೇಂದ್ರ ಮುಶಾವರ ಸದಸ್ಯ ಶೈಖುನಾ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಕೊಡಗು ಖಾಝಿ ಶೈಖುನಾ ಅಬ್ದುಲ್ಲ ಮುಸ್ಲಿಯಾರ್, ಸಯ್ಯದ್ ಹಕೀಂ ತಂಗಳ್ ಆದೂರು, ಹುಸೈನ್ ತಂಗಳ್ ಆದೂರು, ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಅನೀಸ್ ಕೌಸರಿ, ನ್ಯಾಯವಾದಿ ಪವಾಝ್, ಹಾಜಿ ಇಬ್ರಾಹಿಂ ಕತ್ತರ್, ರಶೀದ್ ಹಾಜಿ ಪರ್ಲಡ್ಕ, ತಮಿಡ್ ಹಾಜಿ ಸುಳ್ಯ, ಎಂ.ಪಿ ಅಬ್ದುಲ್ ರಜಾಕ್ ಹಾಜಿ, ತಾಜು ಮೊಹಮ್ಮದ್ ಸಂಪಾಜೆ, ಅಬೂಬಕ್ಕರ್ ಪೋಪಿ ಭಾಗವಹಿಸಿದ್ದರು. ಸಂಸ್ಥೆಯ ಗೌರವಾಧ್ಯಕ್ಷ ಮುಸ್ತಫಾ ದೋಣಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಕುಂಇ ಧರ್ಮತ್ತಣಿ, ಸಿದ್ಧಿಕ್ ಅಡ್ಕ, ಸಿದ್ಧಿಕ್ ಬೋವಿಕಾನ, ಹಾರೀಸ್ ಪೆಲ್ತಡ್ಕ ಮೊದಲಾದವರು ಉಪಸ್ಥಿತರಿದ್ದರು. ಚೈರ್ ಮ್ಯಾನ್ ಅನ್ವರ್ ಆಲಿ ದಾರಿಮಿ ಸ್ವಾಗತಿಸಿದರು, ಮೊಹಿದ್ದೀನ್ ಅನ್ಸಾರ್ ವಂದಿಸಿದರು.