ಅಜ್ಜಾವರ- ಝಯಿನ್ ಎಕ್ಸಲೆನ್ಸ್ ಫಾರ್ ಮಾರಲ್ ಎಜುಕೇಶನ್ ಮಹಿಳಾ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ…

ಸುಳ್ಯ:ಎಸ್.ಕೆ.ಎಸ್.ಎಸ್.ಎಫ್ ಅಡ್ಕ ಇರುವಂಬಳ್ಳ ಶಾಖೆಯು ಆರು ವರ್ಷಗಳ ಹಿಂದೆ ಪ್ರಾರಂಭಿಸಿದ ಝಯಿನ್ ಎಕ್ಸಲೆನ್ಸ್ ಫಾರ್ ಮಾರಲ್ ಎಜುಕೇಶನ್ ಮಹಿಳಾ ಕಾಲೇಜು ಕಟ್ಟಡಕ್ಕೆ ಸಮಸ್ತ ಕೇರಳ ಜಮ್ ಇಯ್ಯತ್ತುಲ್ ಉಲಾಮಾ ಅಧ್ಯಕ್ಷರಾದ ಸಯ್ಯದ್ ಉಲಮಾ ಅಸ್ಸಯ್ಯದ್ ಮಹಮ್ಮದ್ ಜಿಪ್ರಿ ಮುತ್ತುಕೋಯ ತಂಗಳ್ ಅವರು ಅಜ್ಜಾವರದಲ್ಲಿ ಮೇ. 16ಕ್ಕೆ ಶಿಲಾನ್ಯಾಸವನ್ನು ನೆರವೇರಿಸಿದರು.
ಅವರು ಮಾತನಾಡಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಅತ್ಯಂತ ಸುರಕ್ಷಿತವಾಗಿರಬೇಕು ಎಂಬ ನಿಟ್ಟಿನಲ್ಲಿ ಸುತ್ತಲು ಆವರಣಗೋಡೆಯನ್ನು ರಚಿಸಿ ಉತ್ತಮ ವಾತಾವರಣ, ವಸತಿ ಸೌಕರ್ಯದೊಂದಿಗೆ, ಗುಣಮಟ್ಟದ ಶಿಕ್ಷಣವನ್ನು ನೀಡಲಾಗುವುದು. ಕಂಪ್ಯೂಟರ್ ಮತ್ತು ಮೊಬೈಲ್ ನ್ನು ಒಳ್ಳೆಯದಕ್ಕೆ ಉಪಯೋಗಿಸಬೇಕೆಂದರು.
ಅತಿಥಿಗಳಾಗಿ ಕೇಂದ್ರ ಮುಶಾವರ ಸದಸ್ಯ ಶೈಖುನಾ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಕೊಡಗು ಖಾಝಿ ಶೈಖುನಾ ಅಬ್ದುಲ್ಲ ಮುಸ್ಲಿಯಾರ್, ಸಯ್ಯದ್ ಹಕೀಂ ತಂಗಳ್ ಆದೂರು, ಹುಸೈನ್ ತಂಗಳ್ ಆದೂರು, ಗೂನಡ್ಕ ತೆಕ್ಕಿಲ್ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಅನೀಸ್ ಕೌಸರಿ, ನ್ಯಾಯವಾದಿ ಪವಾಝ್, ಹಾಜಿ ಇಬ್ರಾಹಿಂ ಕತ್ತರ್, ರಶೀದ್ ಹಾಜಿ ಪರ್ಲಡ್ಕ, ತಮಿಡ್ ಹಾಜಿ ಸುಳ್ಯ, ಎಂ.ಪಿ ಅಬ್ದುಲ್ ರಜಾಕ್ ಹಾಜಿ, ತಾಜು ಮೊಹಮ್ಮದ್ ಸಂಪಾಜೆ, ಅಬೂಬಕ್ಕರ್ ಪೋಪಿ ಭಾಗವಹಿಸಿದ್ದರು.
ಸಂಸ್ಥೆಯ ಗೌರವಾಧ್ಯಕ್ಷ ಮುಸ್ತಫಾ ದೋಣಿ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಕುಂಇ ಧರ್ಮತ್ತಣಿ, ಸಿದ್ಧಿಕ್ ಅಡ್ಕ, ಸಿದ್ಧಿಕ್ ಬೋವಿಕಾನ, ಹಾರೀಸ್ ಪೆಲ್ತಡ್ಕ ಮೊದಲಾದವರು ಉಪಸ್ಥಿತರಿದ್ದರು. ಚೇರ್ ಮ್ಯಾನ್ ಅನ್ವರ್ ಆಲಿ ದಾರಿಮಿ ಸ್ವಾಗತಿಸಿದರು, ಮೊಹಿದ್ದೀನ್ ಅನ್ಸಾರ್ ವಂದಿಸಿದರು.

whatsapp image 2024 05 17 at 12.06.49 pm

whatsapp image 2024 05 17 at 12.07.36 pm

Sponsors

Related Articles

Back to top button