ರಾಜಾಜಿನಗರದಲ್ಲಿ ಬೃಹತ್ ವಿರಾಟ್ ಹಿಂದೂ ಸಮಾವೇಶ…
ಹಿಂದೂ ಧರ್ಮ ಉಳಿಯಲು ಸಂಕಲ್ಪ ಮಾಡಿ, ಜನಸಂಖ್ಯೆ ನಿಯಂತ್ರಣಕ್ಕೆ ಪ್ರಧಾನಿಗೆ ಮನವಿ-ಶ್ರೀ ಶ್ರೀ ಶ್ರೀ ಪೂರ್ಣನಂದಪುರಿ ಸ್ವಾಮೀಜಿ...
ಬೆಂಗಳೂರು: ಬಸವೇಶ್ವರನಗರ ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ವತಿಯಿಂದ ರಾಜಾಜಿನಗರದ, ಮಂಜುನಾಥನಗರದಲ್ಲಿ ಬೃಹತ್ ಹಿಂದೂ ಸಮಾವೇಶ ಆಯೋಜಿಸಲಾಗಿತ್ತು.
ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಪೂರ್ಣನಂದಪುರಿ ಸ್ವಾಮೀಜಿರವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು, ವಿಜ್ಞಾನಿ ರಘೋತ್ತಮರಾವ್, ಸಂಘದ ಪ್ರಮುಖರಾದ ರಾಜ್ ಗೋಪಾಲ್ ರವರು, ಮಾಜಿ ಬಿಬಿಎಂಪಿ ಸದಸ್ಯರಾದ ಹೆಚ್.ಆರ್.ಕೃಷ್ಣಪ್ಪರವರು ದೀಪ ಬೆಳಗಿಸಿ, ಭಾರತಾ ಮಾತೆ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಮಾವೇಶಕ್ಕೆ ಚಾಲನೆ ನೀಡಿದರು.
ಮಾಜಿ ಪಾಲಿಕೆ ಸದಸ್ಯರುಗಳಾದ ರಾಜಣ್ಣ, ವಿಜಯಕುಮಾರ್, ದೀಪಾ ನಾಗೇಶ್ ರವರು ಉಪಸ್ಥಿತರಿದ್ದರು.
ಶ್ರೀ ಶ್ರೀ ಶ್ರೀ ಪೂರ್ಣನಂದಪುರಿ ಸ್ವಾಮೀಜಿರವರು ಮಾತನಾಡಿ ರಾಜಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು . ದೇವರ ಜೊತೆಯಲ್ಲಿ ಇರಬೇಕು ಎಂಬ ಹಂಬಲದಿಂದ ಯೋಜನಾ ಅಯೋಗದ ಅಧಿಕಾರ ಬಿಟ್ಟು ಲೋಕಕಲ್ಯಾಣಕ್ಕಾಗಿ ನಾನು ದೀಕ್ಷೆ ಪಡೆದು ಸನ್ಯಾಸಿಯಾದೆ.
ಸಮಾಜವೇ ನನ್ನ ಬಂಧುಗಳು, ಅವರ ಕಲ್ಯಾಣಕ್ಕಾಗಿ ನಾನು ಶ್ರಮಿಸುವೆ. ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸಿರುವುದು ಸಂತೋಷದಾಯಕ ವಿಷಯವಾಗಿದೆ.
ಹಿಂದೂ ಧರ್ಮ ಉಳಿಯಬೇಕಾದರೆ ಎಲ್ಲರು ಸಂಕಲ್ಪ ಮಾಡಬೇಕು. ಸ್ವಾತಂತ್ರ್ಯ ನಂತರ ಹಿಂದೂಗಳ ಸಂಖ್ಯೆ ಶೇಕಡ 10ರಷ್ಟು ಆಗಿದೆ. 7ಪರ್ಸೆಂಟ್ ಇದ್ದವರು ಈಗ 17ಪರ್ಸಂಟ್ ಆಗಿದ್ದಾರೆ ಎಂದರೆ ಯೋಚನೆ ಮಾಡಬೇಕಾದ ವಿಷಯವಾಗಿದೆ.
ಬುದ್ದಿ ಜೀವಿಗಳು ಅಂತ ಹೇಳಿಕೊಳ್ಳುವ ಕೆಲವರು ಹಿಂದೂ ಧರ್ಮದ ಕುರಿತು ಅವಹೇಳನ ಮಾಡುತ್ತಾರೆ. ಬೇರೆ ಧರ್ಮದವರಲ್ಲಿ ಅಪಸ್ವರ ಮಾತನಾಡಿದರೆ ಅವರಿಗೆ ಉಳಿಗಾಲವಿಲ್ಲ. ನಮ್ಮಲ್ಲಿ ಜಾತಿ, ದೇವರುಗಳು ಹೆಚ್ಚು ವಿವಿಧತೆ ಇರುವುದರಿಂದ ನಮ್ಮಲ್ಲಿ ಸಂಘಟನೆ ಇಲ್ಲ. ಏಕತೆ ಮೂಡಬೇಕು ಹಿಂದೂಗಳಲ್ಲಿ.
ಮಗ, ತಂದೆ ಕೊಲೆ ಮಾಡುವ ಸಂಗತಿ ನೋಡುತ್ತಿದ್ದೇವೆ, ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಸಂಸ್ಕೃತಿ, ಸಂಪ್ರದಾಯ ಕಲಿಸಬೇಕು.ರಾಜ್ಯದ ಮುಖ್ಯಸ್ಥರು ಒಂದು ವರ್ಗದವರಿಗೆ ಬೆಂಬಲಿಸುವುದು ತಪ್ಪು. ಹಿಂದೂ ಧರ್ಮ ಇಬ್ಬಾಗ ಮಾಡುವಲ್ಲಿ ಸರ್ಕಾರ ಪ್ರಯತ್ನ ಮಾಡುತ್ತಿದೆ.ಹಿಂದೂಗಳಿಗೆ ತೊಂದರೆಯಾದರೆ ಯಾರು ನಮ್ಮನ್ನು ಕಾಪಾಡುವುದಿಲ್ಲ, ಯಾವ ರಾಷ್ಟ್ರವು ಮುಂದೆ ಬರುವುದಿಲ್ಲ. ಸರ್ಕಾರದ ಯೋಜನೆಗಳು ಒಂದು ವರ್ಗಕ್ಕೆ ಮೀಸಲು ಇಡಬಾರದು.ಜನಸಂಖ್ಯೆ ನಿಯಂತ್ರಣ ಮೇಲೆ ಕಾಯಿದೆ ತರಬೇಕು ಎಂದು ಪ್ರಧಾನಿ ನರೇಂದ್ರಮೋದಿರವರಿಗೆ ಮನವಿ ಮಾಡುತ್ತೇನೆ. ದೇಶ ಉಳಿಯಬೇಕಾದರೆ ಜನಸಂಖ್ಯೆ ನಿಯಂತ್ರಣ ಮುಖ್ಯ ಎಂದು ಹೇಳಿದರು.
ವಿಜ್ಞಾನಿ ರಘೋತ್ತಮ್ ರಾವ್ ರವರು ಮಾತನಾಡಿ ಹಿಂದೂ ಧರ್ಮ ಅದಿ ಮತ್ತು ಅಂತ್ಯವಿಲ್ಲ. ಭೂಮಿ ತಾಯಿಯನ್ನು ನಾವು ಹಾಳು ಮಾಡುತ್ತಿದ್ದೇವೆ ಭೂಮಿ, ಪರಿಸರ ಉಳಿಸಿ, ಬೆಳಸಲು ಮಕ್ಕಳಿಗೆ ಅರಿವು ಮೂಡಿಸಬೇಕು ಎಂದರು.
ಮಂಡಲ ಅಧ್ಯಕ್ಷರಾದ ಸುದರ್ಶನ್, ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರರಾವ್, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ, ವಾರ್ಡ್ ಅಧ್ಯಕ್ಷರಾದ ಉಮೇಶ್ ರವರು ಭಾಗವಹಿಸಿದ್ದರು.
ಭಜನೆ , ದೇವರನಾಮ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.





