ಹಿರಿಯರ ಒಡನಾಟವು ಬದುಕಿಗೆ ದಾರಿದೀಪ – ಚಂದ್ರಶೇಖರ…

ಬಂಟ್ವಾಳ: ಮನಸ್ಸು ಮತ್ತು ಬುದ್ಧಿ ಪಕ್ವವಾಗಿರುವ ಹಿರಿಯರಿಂದ ನಾವು ಜೀವನದ ಪಾಠವನ್ನು ಅವರ ಒಡನಾಟದಿಂದ ಗಳಿಸಲು ಸಾಧ್ಯವಿದೆ. ಹಿರಿಯರು ಸೇರಿರುವಲ್ಲಿ ಜ್ಞಾನಾಮೃತವಿದೆ. ಇದು ನಮ್ಮ ಬದುಕಿಗೆ ದಾರಿದೀಪವಾಗುತ್ತದೆ ಎಂದು ಕರ್ನಾಟಕ ಸೇವಾ ಭಾರತಿ ವಿಭಾಗೀಯ ಸಂಚಾಲಕರಾದ ಚಂದ್ರಶೇಖರ ತಿಳಿಸಿದರು
ದಾಸಕೋಡಿ ಕಂದೂರು ರಾಜಾರಾಮ ಐತಾಳ್ ಅವರ ನಿವಾಸದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಕೇಂದ್ರ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ವಹಿಸಿದ್ದರು. ಪ್ರತಿಷ್ಠಾನದ ಸಂಘಟನಾತ್ಮಕ ಬೆಳವಣಿಗೆಯಲ್ಲಿ ಪದಾಧಿಕಾರಿಗಳು ಸಕ್ರಿಯವಾಗಿ ಭಾಗವಹಿಸುವ ಮೂಲಕ ಉತ್ತಮ ಸೇವಾ ಕಾರ್ಯಗಳು ನಡೆಯುವಂತಾಗಬೇಕು. ಮುಂದಕ್ಕೆ ಪ್ರತಿ ತಿಂಗಳ ಸಭೆಯನ್ನು ಟ್ರಸ್ಟಿಗಳು ವಹಿಸಿಕೊಂಡು ನಡೆಸುವಂತೆ ಸಭೆಯಲ್ಲಿ ಆದ ತೀರ್ಮಾನದ ಬಗ್ಗೆ ಸಮ್ಮತಿಯನ್ನು ಸೂಚಿಸಿದರು.
ಕೇಂದ್ರೀಯ ಸಮಿತಿಯ ಸಂಚಾಲಕ ಭಾಸ್ಕರ ಬಾರ್ಯ, ಕೋಶಾಧಿಕಾರಿ ಅನಾರು ಕೃಷ್ಣಶರ್ಮ . ಭವಾನಿ ಶಂಕರ ಶೆಟ್ಟಿ ಪುತ್ತೂರು, ಜಯರಾಮ ಪೂಜಾರಿ ನರಿಕೊಂಬು, ರಾಜಮಣಿ ರಾಮಕುಂಜ, ಭಾರತಿ ರಾಮಕುಂಜ ಉಪಸ್ಥಿತರಿದ್ದರು.
ಪ್ರೊ. ವೇದವ್ಯಾಸ ರಾಮಕುಂಜ ಪ್ರಾರ್ಥಿಸಿದರು. ಚಂದ್ರಶೇಖರ ಆಳ್ವ ಪಡುಮಲೆ ಸ್ವಾಗತಿಸಿದರು. ಉದಯ ರೈ ಶಂಕರ ಪುಣಚ ವಂದಿಸಿದರು. ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Related Articles

Back to top button