ಅರಂತೋಡು- ಮಾನಸಿಕ ಅಸ್ವಸ್ಥ ವ್ಯಕ್ತಿಯಿಂದ ದಾಂಧಲೆ…

ಸುಳ್ಯ: ಅರಂತೋಡು ಮುಖ್ಯ ಪೇಟೆಯಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ಕಲ್ಲೆಸೆಯುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ವರದಿಯಾಗಿದೆ.
ಸುಳ್ಯದಿಂದ ನಡೆದುಕೊಂಡು ಬಂದ ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವ ಅರಂತೋಡು ಪೇಟೆಯ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ, ವ್ಯಕ್ತಿಗಳಿಗೆ ಕಲ್ಲೆಸೆದು ಭಯವನ್ನು ಹುಟ್ಟಿಸುತ್ತಿದ್ದನೆನ್ನಲಾಗೆದೆ. ಅರಂತೋಡು ಪೇಟೆಯನ್ನು ದಾಟಿ ಪಯಸ್ವಿನಿ ಎಂಟರ್ಪ್ರೈಸಸ್ ಹತ್ತಿರ ಕಲ್ಲೆಸೆಯುವುದನ್ನು ಕಂಡ ಸಾರ್ವಜನಿಕರು ಕಲ್ಲುಗುಂಡಿ ಹೊರ ಠಾಣಾ ಪೊಲೀಸರಿಗೆ ಮಾಹಿತಿಯನ್ನು ನೀಡಿದಾಗ ಪೊಲೀಸರು ಆಗಮಿಸಿ ಅವನನ್ನು ಕಲ್ಲುಗುಂಡಿ ಕಡೆಗೆ ಕರೆದುಕೊಂಡು ಹೋದರು ಎಂದು ತಿಳಿದು ಬಂದಿದೆ.