ಮಾಣಿ – ಬಾಲವಿಕಾಸ ಶಾಲೆ ನೂತನ ಕ್ಯಾಂಪಸ್ ಲೋಕಾರ್ಪಣೆ…

ಬಂಟ್ವಾಳ: ಮಾಣಿ ಪೆರಾಜೆ ವಿದ್ಯಾನಗರ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿಕಾಸ ವೈಭವ, ನೂತನ ಕ್ಯಾಂಪಸ್ ಲೋಕಾಪಣಾ ಕಾರ್ಯಕ್ರಮ ಡಿ.22 ರಂದು ನೆರವೇರಿತು.
ಶಕ್ತಿ ಎಜುಕೇಶನ್ ಟ್ರಸ್ಟ್ ಮುಖ್ಯ ಸಲಹೆಗಾರ ರಮೇಶ್ ಕೆ.ಅವರು ನೂತನ ಕ್ಯಾಂಪಸ್ ನ್ನು ದೀಪ ಪ್ರಜ್ವಲನಗೈದು ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಸಂಸ್ಥೆ ಕಟ್ಟುವುದು ಸುಲಭದ ಕೆಲಸ ಅಲ್ಲ. ಶಿಕ್ಷಕರಾಗಿ ಅಪಾರವಾದ ಅನುಭವ ಹೊಂದಿರುವ ಪ್ರಹ್ಲಾದ ಶೆಟ್ಟಿಯವರು ಈ ಶಿಕ್ಷಣ ಸಂಸ್ಥೆಯಲ್ಲಿ ಹೊಸ ಶಿಕ್ಷಣ ನೀತಿಯ‌ ಎಲ್ಲಾ ಅಂಶಗಳನ್ನು ನೀಡುತ್ತಿರುವುದು ಅಭಿನಂದನೀಯವಾಗಿದೆ.ಮಾಣಿಯ ಪರಿಸರವರಿಗೆ ಉತ್ತಮ ಶಿಕ್ಷಣದ‌ ಅವಕಾಶ ಇಲ್ಲಿದ್ದು, ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭಹಾರೈಸಿದರು.
ಬಾಲವಿಕಾಸ ಟ್ರಸ್ಟ್ ಅಧ್ಯಕ್ಷ ಪ್ರಹ್ಲಾದ ಶೆಟ್ಟಿ ಜೆ. ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಬಾಲವಿಕಾಸ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದ ನಟ, ಆ್ಯಂಕರ್ ಬಡೆಕ್ಕಿಲ ಪ್ರದೀಪ ಅವರ ಅನುಪಸ್ಥಿತಿಯಲ್ಲಿ ಅವರ ಹೆತ್ತವರಾದ ಪದ್ಮಾವತಿ,ಚಂದ್ರಶೇಖರ ಭಟ್ ಪ್ರಶಸ್ತಿ ಸ್ವೀಕರಿಸಿದರು.
ಕ್ಯಾಂಪಸ್ ನಿರ್ಮಾಣದಲ್ಲಿ‌ ಸಹಕರಿಸಿದ ಪುರುಷೋತ್ತಮ ಆರ್.ಶೆಟ್ಟಿ, ಸೂರಜ್ ಅಂಚನ್, ಸಂತೋಷ್ ಶೆಟ್ಟಿ,ವಕೀಲ ಪ್ರವೀಣಚಂದ್ರ ಶೆಟ್ಟಿ, ಟಿ.ಎಸ್.ಸಚ್ಚಿದಾನಂದ ರೈ , ಪ್ರತಾಪ ಶೆಟ್ಟಿ ಪಾಂಡಿಬೆಟ್ಟು ಕಡೇಶಿವಾಲಯ,ಅವರನ್ನು ಗೌರವಿಸಲಾಯಿತು.
ಪೆರಾಜೆ ಗ್ರಾಮ.ಪಂ.ಅಧ್ಯಕ್ಷ ಕುಶಲ ಎಂ. ಪೆರಾಜೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಯತಿರಾಜ್ ಶೆಟ್ಟಿ, ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಬಿ.ಶೆಟ್ಟಿ,ಶಾಲಾ ಆಡಳಿತ ಮಂಡಳಿ ಸದಸ್ಯರಾದ ಸುಭಾಷಿಣಿ ಶೆಟ್ಟಿ,ಜಯಲಕ್ಷ್ಮೀ ಪೈ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ. ಶೆಟ್ಟಿ ಸ್ವಾಗತಿಸಿದರು.ಆಡಳಿತಾಧಿಕಾರಿ ರವೀಂದ್ರ ಶೆಟ್ಟಿ ದರ್ಬೆ ಪ್ರಸ್ತಾವನೆಗೈದರು. ಬಾಲವಿಕಾಸ ಟ್ರಸ್ಟ್ ನ ಕಾರ್ಯದರ್ಶಿ ಮಹೇಶ ಶೆಟ್ಟಿ ವಂದಿಸಿದರು.ಶಿಕ್ಷಕಿಯರಾದ ಸುಪ್ರಿಯಾ ಡಿ.,ಶೋಭ ಎಂ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

whatsapp image 2023 12 23 at 7.01.43 pm

Sponsors

Related Articles

Back to top button