ಶ್ರೀ ದುರ್ಗಾಪರಮೇಶ್ವರಿ ಭಕ್ತವೃಂದ ಸಜೀಪ ಮಾಗಣೆ- ಯಕ್ಷಗಾನ ಬಯಲಾಟ ಸೇವೆಯ ಆಮಂತ್ರಣ ಪತ್ರಿಕೆ ಬಿಡುಗಡೆ…

ಬಂಟ್ವಾಳ: ಶ್ರೀ ದುರ್ಗಾಪರಮೇಶ್ವರಿ ಭಕ್ತವೃಂದ ಸಜೀಪ ಮಾಗಣೆ ಇದರ 8ನೇ ವರುಷದ ಯಕ್ಷಗಾನ ಬಯಲಾಟ ಸೇವೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಶ್ರೀ ಕ್ಷೇತ್ರ ನಂದಾವರದಲ್ಲಿ ನೆರೆವೇರಿತು.
ಸಜೀಪ ಮಾಗಣೆಯ ತಂತ್ರಿವರ್ಯರಾದ ಸುಬ್ರಮಣ್ಯ ಭಟ್, ಶ್ರೀ ಕ್ಷೇತ್ರ ನಂದಾವರದ ಪ್ರಧಾನ ಅರ್ಚಕರಾದ ಮಹೇಶ್ ಭಟ್, ಉದ್ಯಮಿಗಳಾದ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಯಕ್ಷಗಾನ ಸಮಿತಿಯ ಅಧ್ಯಕ್ಷರಾದ ನವೀನ್ ಸುವರ್ಣ ಮಿತ್ತಕಟ್ಟ ಹಾಗೂ ಸಮಿತಿಯ ಸರ್ವ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.