ಪೇರಡ್ಕ ನೆರೆ ಸಂತ್ರಸ್ತ ಹಾಫಿಳ್ ಮನೆಗೆ ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ ಭೇಟಿ , ಹತ್ತು ಸಾವಿರ ಪರಿಹಾರ ವಿತರಣೆ…
ಸುಳ್ಯ: ಸಂಪಾಜೆ ಗ್ರಾಮದ ಪೇರಡ್ಕದಲ್ಲಿ ಉಂಟಾದ ನೆರೆಯಿಂದ ಹಾನಿಯಾದ ಪೇರಡ್ಕ ಹಾಫಿಳ್ ರ ಮನೆಗೆ ಇತ್ತೀಚೆಗೆ ಮಾಜಿ ಸಚಿವರಾದ ರಮಾನಾಥ ರೈ ಹಾಗೂ ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೃಷ್ಣಪ್ಪನವರು ತಮ್ಮ ವೈಯಕ್ತಿಕ ಕಾಣಿಕೆಯಾಗಿ ರೂ.10 ಸಾವಿರ ಪರಿಹಾರವನ್ನು ಹಾಫಿಳ್ ರವರ ಕುಟುಂಬಕ್ಕೆ ವಿತರಿಸಿದರು.
ಹಾಫಿಳ್ ರವರು ತಮ್ಮ ಬಟ್ಟೆ ವ್ಯಾಪಾರಕ್ಕೆಂದು ತಂದು ಇರಿಸಿದ ಬಟ್ಟೆ-ಬರೆಗಳು ಹಾಗೂ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಜಲಾವೃತಗೊಂಡು ಹಾನಿಯಾಗಿ ಸುಮಾರು 5 ಲಕ್ಷ ರೂಪಾಯಿ ನಷ್ಟ ಸಂಭವಿಸಿರುತ್ತದೆ.
ಈ ಸಂದರ್ಭದಲ್ಲಿ ಪೇರಡ್ಕ ಜುಮ್ಮ ಮಸೀದಿಯ ಗೌರವಾಧ್ಯಕ್ಷ ಟಿ.ಎಂ. ಶಾಹೀದ್ ತೆಕ್ಕಿಲ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ, ಕಾಂಗ್ರೆಸ್ ಮುಖಂಡರುಗಳಾದ ಭರತ್ ಮುಂಡೋಡಿ, ಟಿ.ಎಂ. ಶಾಹೀದ್ ತೆಕ್ಕಿಲ್, ಡಾ| ರಘು, ಪಿ.ಎಸ್ ಗಂಗಾಧರ, ಸಂಪಾಜೆ ಗ್ರಾಮ ಪಂಚಾಯತನ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಗ್ರಾಮ ಪಂಚಾಯತ್ ನ ಸದಸ್ಯರಾದ ಜಗಧೀಶ್ ರೈ, ಅಬುಸಾಲಿ ಗೂನಡ್ಕ, ಎಸ್.ಕೆ ಹನೀಫ್, ರಹೀಮ್ ಬೀಜದಕಟ್ಟೆ, ವಿಜಯಕುಮಾರ್, ಶಾಫಿ ಕುತ್ತಮೊಟ್ಟೆ, ಎಸ್.ಎಸ್.ಯು.ಐ ಜಿಲ್ಲಾ ಕಾರ್ಯದರ್ಶಿ ಉನೈಸ್ ಗೂನಡ್ಕ, ಸೇವಾದಳ ಯುವ ಬ್ರಿಗೇಡ್ ಜುರೈದ್ ತೆಕ್ಕಿಲ್ ಪೇರಡ್ಕ, ಸಾಧುಮಾನ್ ತೆಕ್ಕಿಲ್ ಪೇರಡ್ಕ, ತಾಜುದ್ದೀನ್ಅ ರಂತೋಡು, ಜುಬೈರ್ ಅರಂತೋಡು ಮೊದಲಾದವರು ಉಪಸ್ಥಿತರಿದ್ದರು.