ಕಾಸರಗೋಡು-ಡಯಾಬಿಟಿಕ್ ಮತ್ತು ಕಿಡ್ನಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ‘ದಿಯಾ ಲೈಫ್’ ಉದ್ಘಾಟನೆ…

ಕಾಸರಗೋಡು: ಪುಲಿಕುನ್ನ್ ನಲ್ಲಿ ಏ. 24 ರಂದು ನೂತನವಾಗಿ ಪ್ರಾರಂಭಗೊಂಡ ಡಯಾಬಿಟಿಕ್ ಮತ್ತು ಕಿಡ್ನಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾದ ‘ದಿಯಾ ಲೈಫ್’ ಅನ್ನು ಕರ್ನಾಟಕ ಸ್ಪೀಕರ್ ಯು ಟಿ ಖಾದರ್ ಉದ್ಘಾಟಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ,ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಆಧುನಿಕ ಲ್ಯಾಬ್ ಉದ್ಘಾಟಿಸಿದರು. ಸಯ್ಯದ್ ಜಲಾಲುದ್ದಿನ್ ತಂಘಳ್ ಕುಂನ್ನುಂಗೈ ದುವಾ ನೆರೆವೇರಿಸಿದರು. ಸಮಾರಂಭದಲ್ಲಿ ಉದ್ಯಮಿ ಎನ್ ಎ ಮೊಹಮದ್, ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನ್ ,ಮಂಜೇಶ್ವರ ಶಾಸಕ ಅಶ್ರಫ್, ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಬೇಬಿ ಬಾಲಕೃಷ್ಣ, ಬಿ ಜೆ ಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ, ಮಾಹಿನ್ ಹಾಜಿ ಕಲ್ಲಟ್ರ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಹನವಾಸ್ ಪಾಧೂರ್, ಜನಪ್ರಿಯ ಆಸ್ಪತ್ರೆಯ ಛೇರ್ಮನ್ ಡಾಕ್ಟರ್ ಬಷೀರ್ ಮೊದಲಾದವರು ಭಾಗವಹಿಸಿದ್ದರು. ವ್ಯವಸ್ಥಾಪಕ ನಿರ್ದೇಶಕ ಡಾಕ್ಟರ್ ಮೊಹಮದ್ ನಫ್ಸೀರ್ ಪಾಧೂರ್ ಮತ್ತ್ ಡಾಕ್ಟರ್ ಮೊಯಿದೀನ್ ಕುಂಞಿ ಅವರು ಆಸ್ಪತ್ರೆಯ ಅಗತ್ಯತೆ ಬಗ್ಗೆ ಮತ್ತು ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.