ರಕ್ತದಾನ ಮಾಡಲು ಹಿಂಜರಿಯಬೇಡಿ – ಸುಧಾಕರ ರೈ…

ಬೆಂಗಳೂರು: ಯುವಕರು ರಕ್ತದಾನ ಮಾಡಲು ಹಿಂಜರಿಯಬಾರದು. ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಯಾವುದೇ ತರಹದ ತೊಂದರೆ ಆಗುವುದಿಲ್ಲ. ಯುವಕರು ಆದಷ್ಟು ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಕರ್ನಾಟಕದಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿ ದಾಖಲೆ ಬರೆದ ಪಿಬಿ ಸುಧಾಕರ ರೈ ಯವರು ಬೆಂಗಳೂರಿನಲ್ಲಿ ನಡೆದ ಎಐಕೆಎಮ್ ಸಿಸಿ ವತಿಯಿಂದ ಮೂರನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಭಿಕರಿಗೆ ಕರೆ ನೀಡಿದರು.
ಎಐಕೆಎಂಸಿಸಿ ಬೆಂಗಳೂರು ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯುಮಾನಿಟಿ ವತಿಯಿಂದ ನಡೆಯುತ್ತಿರುವ 3 ನೇ ನೂರು ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಇದರ ಪ್ರಯುಕ್ತ ನಡೆಯುತ್ತಿರುವ ರಕ್ತದಾನ ಶಿಬಿರದಲ್ಲಿ ಬಾಗವಹಿಸಿದರು. ಎಐಕೆಎಮ್ ಸಿಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಎಮ್.ಕೆ.ನೌಶಾದ್ ಅತಿಥಿಗಳನ್ನು ಬರಮಾಡಿಕೊಂಡರು.
ಪಾಣಕ್ಕಾಡ್ ಸೈಯ್ಯದ್ ಸಾದಿಕಲಿ ಶಿಹಾಬ್ ತಂಙಳ್, ಶಾಸಕ ಎನ್ ಎ ಹಾರಿಸ್, ಸ್ಥಳೀಯ ಕಾರ್ಪೋರೇಟರ್ ಮುಜಾಹಿದ್ ಫಾಶಾ, ಯೂತ್ ಕಾಂಗ್ರೆಸ್ ಮಂಜು, ಎಐಕೆಎಂಸಿಸಿ ಬೆಂಗಳೂರು ಅದ್ಯಕ್ಷರಾದ ಟಿ ಉಸ್ಮಾನ್ ಎಐಕೆಎಮ್ ಸಿಸಿ ಬೆಂಗಳೂರು ಪ್ರಧಾನ ಕಾರ್ಯದರ್ಶಿ ಎಂ ಕೆ ನೌಶಾದ್ ಹಾಗೂ ಹಲವಾರು ಗಣ್ಯರು ಧಾರ್ಮಿಕ ಮುಖಂಡರುಗಳು ಉಪಸ್ಥಿತರಿದ್ದರು.