ಸಂಪಾಜೆ ಗ್ರಾಮದಲ್ಲಿ ಜಲ ಪ್ರಳಯ – ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಂದ ಕೃಷಿಕರ ನಷ್ಟ ವೀಕ್ಷಣೆ…

ಸುಳ್ಯ: ಸಂಪಾಜೆ ಗ್ರಾಮದಲ್ಲಿ ಭೀಕರ ಮಳೆ ಜಲ ಪ್ರಳಯದಿಂದ ಪಯಸ್ವಿನಿ ನದಿಯ ಹೊಳೆಯ ಸಮೀಪ ಇರುವ ಕೃಷಿ ಸ್ಥಳದಲ್ಲಿ ಹಾನಿಯಾದ ಕೃಷಿಕರ ನಷ್ಟವನ್ನು ಖುದ್ದಾಗಿ ವೀಕ್ಷಿಸಿ ಮಾಹಿತಿಯನ್ನು ಪಡೆಯಲು ಬಂದ ತೋಟಗಾರಿಕೆ ಇಲಾಖೆಯ ಅಧಿಕಾರಿ ಶ್ರೀಮತಿ ಸುಹಾನ ಅವರಿಗೆ ಪೇರಡ್ಕ, ದರ್ಕಾಸ್, ಗೂನಡ್ಕ, ಕೊಪ್ಪತಕಜೆ, ಪೆಲ್ತಡ್ಕದ ಕೃಷಿಕರ ಸಮಸ್ಯೆಯನ್ನು ಮತ್ತು ನಷ್ಟದ ಅಂದಾಜನ್ನು ವಿವರಿಸುತ್ತಿರುವ ಸ್ಥಳೀಯ ಕೃಷಿಕರಾದ ಟಿ ಎಂ ಶಾಹೀದ್ ತೆಕ್ಕಿಲ್ , ಪಂಚಾಯತ್ ಸದಸ್ಯ ಅಬುಸಾಲಿ ಗೂನಡ್ಕ, ಗಣಪತಿ ಭಟ್ ದರ್ಕಾಸ್ , ಜುರೈದ್ ತೆಕ್ಕಿಲ್ ಪೇರಡ್ಕ, ಸಾದುಮನ್ ತೆಕ್ಕಿಲ್ ಪೇರಡ್ಕ, ಉಸ್ಮಾನ್ ಪೇರಡ್ಕ, ಸತ್ಯಜಿತ್ ಪೇರಡ್ಕ, ಲಕ್ಷ್ಮಿ ನಾರಾಯಣ ಪೇರಡ್ಕ. ಈ ಸಂದರ್ಭದಲ್ಲಿ ಪಂಚಾಯತ್ ಸಿಬ್ಬಂದಿ ಉಮೇಶ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button