ಗೋಳ್ತಮಜಲು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ – ಆಟಿದ ನೆಂಪು ಕಾರ್ಯಕ್ರಮ…

ಬಂಟ್ವಾಳ: ಗೋಳ್ತಮಜಲು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ ಇಲ್ಲಿ ‘ಆಟಿದ ನೆಂಪು’ ವಿಶೇಷ ಕಾರ್ಯಕ್ರಮ ಜರುಗಿತು.
ತುಳುನಾಡಿನ ಪ್ರಸಿದ್ಧ ದೈವ ನರ್ತಕರಾದ ಶ್ರೀ ಲೋಕಯ್ಯ ಶೇರ ಅವರು ಚೆನ್ನೆ ಮನೆಗೆ ಆಟದ ಕಾಯಿ ಹಾಕಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಟಿ ತಿಂಗಳ ವಿಶೇಷತೆ ಮತ್ತು ಮಹತ್ವದ ಕುರಿತಾಗಿ ಮಾತನಾಡಿದರು.
ಶ್ರೀಮತಿ ಸರಸ್ವತೀ ಮಾತಾಜಿ ಅವರು ಔಷಧೀಯ ಸಸ್ಯಗಳ ಪರಿಚಯ ಮತ್ತು ಉಪಯೋಗಗಳನ್ನು ಮಕ್ಕಳಿಗೆ ತಿಳಿಸಿದರು. ವಿದ್ಯಾರ್ಥಿಗಳು ತುಳು ಗಾದೆ, ಎದುರು ಕತೆ, ಪಾಡ್ದನ ಮುಂತಾದ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ಭಾಸ್ಕರ್ ಕುಲಾಲ್,ಉಪಾಧ್ಯಕ್ಷೆ ಶ್ರೀಮತಿ ಚಂಚಲಾಕ್ಷಿ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಸವಿತ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೋಭಲತಾ ಮತ್ತು ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪೋಷಕರು ತಮ್ಮ ತಮ್ಮ ಮನೆಗಳಲ್ಲಿ ಆಟಿಯ ವಿಶೇಷ ತಿನಿಸುಗಳನ್ನು ತಯಾರಿಸಿ ಶಾಲೆಗೆ ತಂದು ಎಲ್ಲರಿಗೂ ಉಣಬಡಿಸಿದರು. ವಿದ್ಯಾರ್ಥಿಗಳು ಆಟಿಕಳೆಂಜನ ವೇಷ ತೊಟ್ಟು ಎಲ್ಲರನ್ನೂ ರಂಜಿಸಿದರು.

Sponsors

Related Articles

Back to top button