ಅಡ್ಯಡ್ಕ ಟಾಸ್ಕ್ ಪೋರ್ಸ್ ಸಭೆ…
ಸುಳ್ಯ: ಅಡ್ಯಡ್ಕ ಸಿಆರ್ ಸಿ ಕಾಲನಿಯಯಲ್ಲಿ ತೊಡಿಕಾನ ಗ್ರಾಮದ ಕೋವಿಡ್ ಟಾಸ್ಕಪೋರ್ಸ್ ಸಮಿತಿಯ ಸಭೆ ಜೂ. 21 ರಂದು ನಡೆಯಿತು.
ಜೂ. 3 ರಂದು ಕಾಲನಿಯಲ್ಲಿ ಅಳವಡಿವಸಲಾಗಿದ್ದ ಸೀಲ್ ಡೌನ್ ನ್ನೂ ತೆರವುಗೊಳಿಸಲಾಯಿತು. ಗ್ರಾ. ಪಂ ಅಧ್ಯಕ್ಷೆ ಹರಿಣಿ ದೇರಾಜೆ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ , ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟ್ರಮಣ ಪೆತ್ತಾಜೆ , ಶ್ರೀಮತಿ ಭವಾನಿ , ರವೀಂದ್ರ ಪಂಜಿಕೋಡಿ, ಶ್ರೀಮತಿ ವಿನೋದ, ಶ್ರೀ ಶಶಿಧರ ಪಂಜಿಕೋಡಿ, ಅರಂತೋಡು ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ , ಸುಳ್ಯ ಎಪಿಎಮ್ ಸಿ ಮಾಜಿ ಅಧ್ಯಕ್ಷರಾದ ದೀಪಕ್ ಕುತ್ತಮೊಟ್ಟೆ , ಗ್ರಾಮ ಲೆಕ್ಕಾಧಿಕಾರಿ ಶ್ರೀಮತಿ ಗಿರಿಜಾಕ್ಷಿ , ಗ್ರಾಮದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಅಡ್ಯಡ್ಕ ಕಾಲನಿಯ ಕೊರೋನಾ ವಾರಿಯರ್ಸ್ ನವರು ಉಪಸ್ಥಿತರಿದ್ದರು. ಸಿಆರ್ ಸಿ ಕಾಲನಿಯ ಪರವಾಗಿ ಶಂಕರ್ ಲಿಂಗಂ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನಂತರ ಕಾಲೊನಿಯ ಪ್ರತಿ ಮನೆಯ ಭೇಟಿಮಾಡಿ ಶ್ರೀಮತಿ ಭವಾನಿ ಯವರು ನೀಡಿದ ಲಾಡುಗಳನ್ನು ವಿತರಿಸಿ ಸೀಲ್ ಡೌನ್ ನ್ನು ತೆರವುಗೊಳಿಸಲಾಯಿತು.