ಅಕ್ರಮ ಕಸಾಯಿಖಾನೆಗೆ ದಾಳಿ – ಮೂವರ ಬಂಧನ…

ಬಂಟ್ವಾಳ: ಅಕ್ರಮ ಕಸಾಯಿಖಾನೆಗೆ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ನೇತೃತ್ವದಲ್ಲಿ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಲೊರೆಟ್ಟೋ ನಿವಾಸಿಗಳಾದ ಉಮ್ಮರ್ ಫಾರೂಕ್, ಆದಂ ಮತ್ತು ಆಸ್ಬಕ್ ಬಂಧಿತ ಆರೋಪಿಗಳು. ಬಂಧಿತ ರಿಂದ ನಾಲ್ಕು ಜಾನುವಾರು , ಎರಡು ಕಿಂಟ್ವಾಲ್ ದನದ ಮಾಂಸ, ಎರಡು ದನದ ತಲೆ, ಒಂದು ಪಿಕಪ್ ವಾಹನ ಹಾಗೂ ಜಾನುವಾರು ಕಡಿದು ಮಾಂಸ ಮಾಡಲು ಉಪಯೋಗಿಸುವ ಸಲಕರಣೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಲೊರೆಟ್ಟೋ ಟಿಪ್ಪು ನಗರದಲ್ಲಿ ಶಂಶುದ್ದೀನ್ ಎಂಬಾತನ ಮನೆಯ ಹಿಂಬದಿಯ ಅಕ್ರಮ ಕಟ್ಟಡದಲ್ಲಿ ಅಕ್ರಮವಾಗಿ ಜಾನುವಾರು ಗಳನ್ನು ಹತ್ಯೆ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮುಂಜಾನೆ ಬಂಟ್ವಾಳ ನಗರ ಠಾಣಾ ಎಸ್.ಐ.ಅವಿನಾಶ್ ನೇತೃತ್ವದಲ್ಲಿ ಬಂಟ್ವಾಳ ಪೋಲೀಸರ ತಂಡ ದಾಳಿ ನಡೆಸಿತ್ತು.
ದಾಳಿಯ ವೇಳೆ ಮನೆಯ ಮಾಲಕ ಹಾಗೂ ಉಳಿದವರು ಪರಾರಿಯಾಗಿದ್ದಾರೆ. ಸ್ಥಳದಲ್ಲಿ ದನವನ್ನು ಕಡಿದು ಮಾಂಸ ಮಾಡಿ ಮಾರಾಟಕ್ಕೆ ತಯಾರು ಮಾಡುತ್ತಿದ್ದ ಮೂವರು ಆರೋಪಿಗಳು ಪೋಲೀಸರ ಬಲೆಗೆ ಬಿದ್ದಿದ್ದಾರೆ. ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ

Sponsors

Related Articles

Back to top button