ಬಂಟ್ವಾಳದ ಮೃತ ಮಹಿಳೆಯ ಸಂಬಂಧಿಯಲ್ಲೂ ಕೊರೊನಾ ಧೃಡ…..
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಮತ್ತೋರ್ವ ಮಹಿಳೆಗೆ ಕೋವಿಡ್-19 ಸೋಂಕು ದೃಢವಾಗಿದೆ. ಇತ್ತೀಚೆಗೆ ಸೋಂಕಿನ ಕಾರಣ ಮೃತರಾದ ಮಹಿಳೆಯ ಸಂಪರ್ಕದಿಂದ ಈ ಮಹಿಳೆಗೆ ಸೋಂಕು ತಾಗಿರುವುದು ದೃಢವಾಗಿದೆ.
78 ವರ್ಷದ ಮಹಿಳೆ ಇತ್ತೀಚೆಗೆ ಪಾರ್ಶ್ವವಾಯುಗೆ ಸಂಬಧಿಸಿದಂತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಮೃತಪಟ್ಟ ಮಹಿಳೆಗೆ ಹತ್ತಿರದ ಸಂಬಂಧಿಯಾಗಿರುವ ಈಕೆಯನ್ನು ಬುಧವಾರ ಖಾಸಗಿ ಆಸ್ಪತ್ರೆಯಿಂದ ಜಿಲ್ಲೆಯ ಕೋವಿಡ್ ಆಸ್ಪತ್ರೆ ವೆನ್ಲಾಕ್ ಗೆ ದಾಖಲಿಸಲಾಗಿತ್ತು.
ಇವರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಇದೀಗ ಸೋಂಕು ದೃಢಪಟ್ಟಿದೆ. ಮೃತ ಮಹಿಳೆಯ ಮಕ್ಕಳ ಹಾಗೂ ಪತಿಯ ವರದಿ ನೆಗೆಟಿವ್ ಬಂದಿದೆ.