ಬಿ ಸಿ ರೋಡ್- ಬೃಹತ್ ಪಂಜಿನ ಮೆರವಣಿಗೆ ಹಾಗೂ ಬಲಿದಾನ್ ದಿವಸ್ ಕಾರ್ಯಕ್ರಮ…

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಬಂಟ್ವಾಳ ವತಿಯಿಂದ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತ ಮಾತೆಯ ಪಾದಗಳಿಗೆ ಪ್ರಾಣ ಅರ್ಪಿಸಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜ್ ಗುರು, ಮತ್ತು ಸುಖ್ ದೇವ್ ಅವರ ಸ್ಮರಣಾರ್ಥವಾಗಿ ಬೃಹತ್ ಪಂಜಿನ ಮೆರವಣಿಗೆ ಹಾಗೂ ಬಲಿದಾನ್ ದಿವಸ್ ಕಾರ್ಯಕ್ರಮ ಬಿ ಸಿ ರೋಡಿನಲ್ಲಿ ನಡೆಯಿತು.

ಮಂಗಳೂರು ವಿಭಾಗದ ಧರ್ಮ ಜಾಗರಣ ಸಹಸಂಯೋಜಕ್ ಪ್ರಕಾಶ್ ಮಲ್ಪೆ ಮಾತನಾಡಿ, ದಾರಿ ತಪ್ಪುತ್ತಿರುವ ಯುವಪೀಳಿಗೆಗೆ ದೇಶಕ್ಕಾಗಿ ಹೋರಾಟ ಮಾಡಿದ ಭಗತ್ ಸಿಂಗ್ ರಂತಹ ಮಹಾನ್ ವ್ಯಕ್ತಿಗಳ ಕಥೆ ಹೇಳಬೇಕಾದ ಅನಿವಾರ್ಯತೆ ಇದೆ ಎಂದರು.
ಕೈಕಂಬ ಪೊಳಲಿ ದ್ವಾರದಿಂದ ಬಿಸಿರೋಡು ರಕ್ತೇಶ್ವರಿ ದೇವಸ್ಥಾನ ದ ವರೆಗೆ ಬಂದ ಪಂಜಿನ ಮೆರವಣಿಗೆಯನ್ನು ಕೈಕಂಬದಲ್ಲಿ ಉದ್ಘಾಟಿಸಿದ ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ, ದೇಶಕ್ಕಾಗಿ ಸೇವೆಗೈದು ಬಲಿದಾನ ಮಾಡಿದ ವೀರಪುರಷರ ನೆನಪು ಮಾಡುವ ಕೆಲಸ ಬಿಜೆಪಿ ಯುವಮೋರ್ಚಾದಿಂದ ಅಗುತ್ತಿರುವುದು ಸಂತಸದ ವಿಚಾರ ಎಂದರು.
ಈ ಸಂದರ್ಭದಲ್ಲಿ ಬಂಟ್ವಾಳ ಬೂಡ ಅಧ್ಯಕ್ಷ ದೇವದಾಸ ಬಂಟ್ವಾಳ, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಪುರಸಭಾ ಸದಸ್ಯರಾದ ಎ.ಗೋವಿಂದ ಪ್ರಭು, ಹರಿಪ್ರಸಾದ್ , ಗ್ರಾ.ಪಂ.ಸದಸ್ಯ ರಾದ ತನಿಯಪ್ಪ ಗೌಡ,ಕಾರ್ತಿಕ್ ಬಲ್ಲಾಳ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ದಾಸ್ ಬಂಟ್ವಾಳ, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಬಂಟ್ವಾಳ ಯುವಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು, ಪಕ್ಷದ ಪ್ರಮುಖ ರಾದ ಸುಲೋಚನ ಜಿ.ಕೆ.ಭಟ್, ಡೊಂಬಯ್ಯ ಅರಳ, ದಿನೇಶ್ ಅಮ್ಟೂರು, ಕೇಶವ ದೈಪಲ, ಸದಾನಂದ ರಂಗೋಲಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಮೋನಪ್ಪ ದೇವಶ್ಯ, ರವೀಶ್ ಶೆಟ್ಟಿ ವಿಟ್ಲ, ರಮನಾಥ ರಾಯಿ, ಪುರುಷೋತ್ತಮ್ ಸಾಲಿಯಾನ್ ನರಿಕೊಂಬು , ಗಣೇಶ್ ರೈ ಮಾಣಿ, ನಂದರಾಮ್ ರೈ, ಚರಣ್ ಜುಮಾದಿಗುಡ್ಡೆ, ಪ್ರಣಾಮ್ ಅಜ್ಜಿಬೆಟ್ಟು, ಭರತ್ ಕುಮ್ಡೆಲು, ತನಿಯಪ್ಪ ಗೌಡ, ವಿನೀತ್ ಶೆಟ್ಟಿ, ಅಶ್ವತ್ ಅರಳ,ವಜ್ರನಾಥ ಕಲ್ಲಡ್ಕ, ಮತ್ತಿತರರು ಉಪಸ್ಥಿತರಿದ್ದರು.
ವಿನೋದ್ ಶೆಟ್ಟಿ ಪಟ್ಲ ಸ್ವಾಗತಿಸಿ, ಸುರೇಶ್ ಕೋಟ್ಯಾನ್ ವಂದಿಸಿದರು.ಕಿಶೋರ್ ಪಲ್ಲಿಪಾಡಿ ಕಾರ್ಯಕ್ರಮ ನಿರೂಪಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button