ನವರೂಪಧಾರಿಣಿ…

ನವರೂಪಧಾರಿಣಿ…

ತಾಯಿಯ ಒಲುಮೆಯ ಬೇಡುವ ನಾವು
ಅಳಿಸಲು ನಮ್ಮಯ ಬಾಳಿನ ನೋವು
ನವವಿಧ ಭಕ್ತಿಗೆ ಕರಗುವೆ ನೀನು
ನವರೂಪಗಳಲಿ ದರುಶನ ನೀಡು||

ಪರ್ವತರಾಜನ ಪುತ್ರಿಯೇ ನೀನು
ಬ್ರಹ್ಮಚಾರಿಣಿ ನಮಿಸುವೆ ನಾನು
ಚಂದ್ರಘಂಟಾ ರುದ್ರನ ರಾಣಿ
ಭೂಮಿಯ ಸೃಷ್ಟಿಯ ಕೂಷ್ಮಾಂಡಿನೀಯೆ||

ಮಮತೆಯ ತೋರುವ ಸ್ಕಂದನ ಮಾತೆ
ದುರಿತವ ಕಳೆಯುವ ಕಾತ್ಯಾಯಿನಿಯೆ
ದುಷ್ಟರ ಮರ್ದಿನಿ ಕಾಳರಾತ್ರಿಯೆ
ಗೌರಿಯ ರೂಪದಿ ತಪವನು ಗೈದೆ||

ಸಿದ್ದಿಯ ಕರುಣಿಸೋ ಸಿದ್ಧಿದಾತ್ರಿಯೆ
ಬಾಳಿನ ತಾಪವ ದಹಿಸೋ ದೇವಿ
ದುಗುಡವನಳಿಸುತ ಶಾಂತಿಯ ತುಂಬಿ
ಅನುದಿನ ನಿನ್ನಯ ಸ್ಮರಣೆ ನೀಡೆ

ರಚನೆ:ಡಾ. ವೀಣಾ ಎನ್ ಸುಳ್ಯ

Sponsors

Related Articles

Back to top button