ರಂಗುರಂಗಿನ ಹೋಳಿ ಜೊತೆ ಕರೋನ…

ರಂಗುರಂಗಿನ ಹೋಳಿ ಜೊತೆ ಕರೋನ….

೧) ಗೆಳತಿ ರಂಗು ರಂಗಿನ ಹೋಳಿ
ಹಬ್ಬ ಬಂತು ಸ್ನೇಹಿತರ ಜೊತೆಗೆ
ಸೇರಿ ಬಣ್ಣದಾಟವಾಡುವ ಸಮಯದ
ಜೊತೆಜೊತೆಗೆ ಕರೋನನು ಬಂತು…

೨) ಹೋಳಿ ಹಬ್ಬಕ್ಕೆ ಸ್ನೇಹಿತರ ಊರಿಗೆ
ಹೋಗಿ ಸ್ನೇಹಿತರ ಜೊತೆಗೆ ಸೇರಿ
ಕುಣಿದು ಕುಪ್ಪಳಿಸಿ ಹೋಳಿ ಹಬ್ಬ
ಆಚರಣೆ ಮಾಡುತ್ತಿದ್ವಿ ಆದರೀಗ ಅದು
ಬರಿ ನೆನಪು ಗೆಳತಿ ಕಾರಣ ಕರೋನ…

೩) ಗೆಳತಿ ಪ್ರತಿ ವರ್ಷ ಹೋಳಿ ಹಬ್ಬಕ್ಕೆ ನಮ್ಮ
ಊರಿಗೆ ಬಂದು ನಗುನಗುತಾ ನನ್ನ ಗಲ್ಲಕ್ಕೆ
ಬಣ್ಣ ಹಚ್ಚಿ ಸಂತೋಷ ಪಡತ್ತಿದ್ದಿ ಗೆಳತಿ
ಆದರೀವರ್ಷ ಹೋಳಿ ಹಬ್ಬಕ್ಕೆ ನೀ
ಬರದಾಯಿತಲ್ಲ ಗೆಳತಿ ಕಾರಣ ಕರೋನ…

೪) ಗೆಳತಿ ಮತ್ತೆ ಕರೋನ ಲಾಕ್ ಡೌನ್
ಎಂದು ಹೋಳಿ ಹಬ್ಬಕ್ಕೆ ಬರುವುದು
ಮಾತ್ರ ಬಿಡಬ್ಯಾಡ್ ಗೆಳತಿ ನಿನಗಾಗಿ
ನಾ ದಾರಿ ಕಾಯುತಿರುವೆ ಗೆಳತಿ…

೫) ರಂಗು ರಂಗಿನ ಬಣ್ಣದ ಹೋಳಿ ಹಬ್ಬಕ್ಕೆ
ನೀ ಬಂದರೆ ನನಗೆ ಹೊಸ ಚೈತನ್ಯ ಸಿಕ್ಕಂತೆ
ಯಾವ ಕರೋನದ ಭಯವು ಏನಗಿಲ್ಲ
ನೀ ಬರುವ ದಾರಿಯಲ್ಲಿ ನಾ ಕಾದು
ಕುಳಿತಿರುವೆ ಬೇಗ ಬಾ ಗೆಳತಿ…

 

 

 

ರಚನೆ: ಬಸವರಾಜ ಎಸ್. ಬಾಗೇವಾಡಿಮಠ.
ವಿಳಾಸ: ರಂಗನಾಥ ನಗರ:
ರಾಣೆಬೇನ್ನೂರು: 581115. ಜಿಲ್ಲಾ: ಹಾವೇರಿ.

ಮೊ ನಂ: 9611381039

Sponsors

Related Articles

One Comment

  1. ಹೋಳಿ ಕವನ ಪ್ರಚಾರ ಮಾಡಿದಕ್ಕೆ ಮಾದ್ಯಮ ರವರಿಗೆ ತುಂಬಾ ಧನ್ಯವಾದಗಳು

Leave a Reply

Your email address will not be published. Required fields are marked *

Back to top button