ಸ್ಕಂದ ಮಾತೆ…

ಸ್ಕಂದ ಮಾತೆ…
ಶಿವಶಕ್ತಿಯರೊಂದುಗೂಡಿ
ಅಗ್ನಿಪುಂಜ ಹುಟ್ಟಲು
ನಭದ ತಾರೆಯಿಳಿದು ಬಂದು
ಪೊರೆಯೆ ಕಂದ ಜನಿಸಲು
ಸ್ಕಂದನನ್ನು ಮಡಿಲಲ್ಲಿಟ್ಟು
ಪ್ರೀತಿಯಿಂದ ಸಲಹಿದೆ
ಕಮಲ ಪೀಠದಲ್ಲಿ ಕುಳಿತು
ಲೋಕ ಮಾತೆಯಾದೆ ನೀ
ಅಸುರ ಕುಲದ ನಾಶಕಾಗಿ
ದೇವಸೈನ್ಯ ಹೊರಡಲು
ಕಾರ್ತಿಕೇಯ ಮುಂದೆ ನಿಂತು
ವಿಜಯಶಾಲಿಯಾಗಲು
ದೇವಗಣವು ನಮೋ ಎನಲು
ತೃಪ್ತಿಯಿಂದ ನೋಡಿದೆ
ನಿನ್ನ ಸ್ಮರಣೆ ಮಾತ್ರದಿಂದ
ಮನದ ಖೇದವಳಿಸುವೆ
ಮಿನುಗುತಿರುವ ನಯನದಿಂದ
ಕರುಣೆಯನ್ನು ಹರಿಸುವೆ
ಶಕ್ತಿಯನ್ನು ಧೈರ್ಯವನ್ನು
ನಿರುತ ಮನದಿ ತುಂಬುವೆ
ರ:ಡಾ. ವೀಣಾ ಎನ್. ಸುಳ್ಯ