ಸಖೀ ಗೀತ…

ಸಖೀ ಗೀತ…
ಹೃದಯದಲ್ಲಿ ನಿನ್ನ ನೆನಪು
ಉಕ್ಕಿಬರಲೊಮ್ಮೆಯೇ
ಕಣ್ಣಿನಲ್ಲಿ ನೀರು ಜಿನುಗಿ
ಜಗದ ಚಿತ್ರ ಮಸುಕಿತು
ಪ್ರೀತಿ ಮಾತು ಒಲವ ನೋಟ
ಎನ್ನೆಡೆಗೇ ಎಸೆಯಲು
ನನ್ನರಿವದು ಮರೆತು ಹೋಗಿ
ನಿನಗೆ ಸೋತು ಹೋದೆನು
ಎಲ್ಲಿ ನೋಡಲಲ್ಲಿ ನಮ್ಮ
ಬಿಂಬ ಮೂಡಿ ನಿಲ್ಲಲು
ಗಗನವೆಲ್ಲ ನಾವೆ ತುಂಬಿ
ವಿಶ್ವವನ್ನೇ ಕ್ರಮಿಸಲು
ನನ್ನ ಶ್ರುತಿಗೆ ಉಸಿರು ಕೊಟ್ಟು
ಪ್ರೇಮರಾಗ ಹಾಡಲು
ಕಣಕಣವೂ ತಂತಿಯಾಗಿ
ಸುಖದ ಗೀತ ಮಿಡಿಯಿತು
ರಚನೆ: ಡಾ. ವೀಣಾ ಎನ್ ಸುಳ್ಯ
Sponsors