ಸುಳ್ಯ ಪ್ರೆಸ್ ಕ್ಲಬ್ ಕಟ್ಟಡಕ್ಕೆ ಟಿ ಎಂ ಶಾಹೀದ್ ತೆಕ್ಕಿಲ್ ರವರಿಂದ ಪ್ರಥಮ ಕಂತಿನ ರೂ.25000 ಹಸ್ತಾಂತರ…

ಸುಳ್ಯ: ಸುಳ್ಯ ಪ್ರೆಸ್ ಕ್ಲಬ್ ಕಟ್ಟಡ ಕಾಮಗಾರಿಗೆ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ, ಸಾಮಾಜಿಕ ರಾಜಕೀಯ ಧುರೀಣ, ಗೂನಡ್ಕ ಸಂಪಾಜೆಯ ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆ ಇದರ ಸ್ಥಾಪಕ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅವರು ಇಂದು ಮೊದಲ ಕಂತಾಗಿ ರೂ 25000ದ ಚೆಕ್ ನ್ನು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಹರೀಶ್ ಬಂಟ್ವಾಳ್ ರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಹಾಜಿ ಅಶ್ರಫ್ ಗುಂಡಿ, ಖಜಾಂಜಿ ಟಿ ಎಂ ಜಾವೇದ್ ತೆಕ್ಕಿಲ್, ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಮಶೂದ್ ಆಶ್ರಯ ಫೌಂಡೇಷನ್,ಪ್ರೆಸ್ ಕ್ಲಬ್ ನಿರ್ದೇಶಕರಾದ ಶರೀಫ್ ಜಟ್ಟಿಪಳ್ಳ ಉಪಸ್ಥಿತರಿದ್ದರು.

WhatsApp Image 2022 11 15 At 3.34.01 PM 300x248

Related Articles