ಸುಳ್ಯ ತಾಲೂಕಿಗೆ ಕ್ರೀಡಾ ಇಲಾಖೆಯಿಂದ ಹೈ ಜಂಪ್ ಬೆಡ್ ಒದಗಿಸುವಂತೆ ಸ್ಪೀಕರ್ ರವರಿಗೆ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ಮನವಿ…

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಗ್ರಾಮೀಣ ಪ್ರದೇಶವಾಗಿದ್ದು ಜಿಲ್ಲಾ ಕೇಂದ್ರದಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿದೆ, ಕೊಡಗು ಜಿಲ್ಲೆ ಮತ್ತು ಕೇರಳ ರಾಜ್ಯದ ಗಡಿ ಪ್ರದೇಶವಾಗಿದ್ದು ಕ್ರೀಡಾ ಕೂಟಗಳು ಆಗಾಗ ನಡೆಯುತ್ತಿರುತ್ತದೆ.
ತಾಲೂಕು ಮಟ್ಟದ, ಜಿಲ್ಲಾ ಮಟ್ಟದ ಕ್ರೀಡಾಕೂಟಗಳು ನಡೆಯುವ ಸಂದರ್ಭದಲ್ಲಿ ತಾಲೂಕಿಗೆ ಹೈ ಜಂಪ್ ಬೆಡ್ ಇಲ್ಲದೆ ಲಭ್ಯತೆಗೆ ಅನುಗುಣವಾಗಿ ಪುತ್ತೂರು ಅಥವಾ ಮಂಗಳೂರಿನಿಂದ ತರಬೇಕಾಗಿದೆ. ಬೆಡ್ ಗಾತ್ರದಲ್ಲಿ ದೊಡ್ಡದಾಗಿದ್ದು ಸಾಗಿಸಲು ಲಾರಿ ಬೇಕಾಗುತ್ತದೆ. ಇದರಿಂದ ಶಾಲಾ ಕಾಲೇಜುಗಳಿಗೆ, ಯುವ ಸಂಘಟನೆಗಳಿಗೆ ತುಂಬಾ ಕಷ್ಟವಾಗುತ್ತಿದೆ.
ಹೈ ಜಂಪ್ ಬೆಡ್ ಖರೀದಿಗೆ ಸುಮಾರು ರೂ 6 ಲಕ್ಷ ಅವಶ್ಯಕತೆ ಇರುತ್ತದೆ. ಆದ್ದರಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಸುಳ್ಯ ತಾಲೂಕಿಗೆ ಹೈ ಜಂಪ್ ಬೆಡ್ ಒದಗಿಸುವಂತೆ ಸಂಬಂಧ ಪಟ್ಟವರಿಗೆ ಶಿಫಾರಸು ಮಾಡುವಂತೆ ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ ಅವ್ರು ಸ್ಪೀಕತ್ ಖಾದರ್ ಅವರಿಗೆ ಮನವಿ ಸಲ್ಲಿಸಿದರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸ್ಪೀಕರ್ ರವರು ಅಗತ್ಯ ಕ್ರಮ ಕೈಗೊಳ್ಳು ವಂತೆ ಕ್ರೀಡಾ ಇಲಾಖೆಗೆ ಸೂಚಿಸುವುದಾಗಿ ತಿಳಿಸಿದರು.

Related Articles

Back to top button