ಯಕ್ಷಾಂಗಣದಲ್ಲಿ ಎ.ಕೆ.ನಾರಾಯಣ ಶೆಟ್ಟಿ, ಮಹಾಬಲ ಶೆಟ್ಟಿ ಸಂಸ್ಮರಣೆ…
ಸಾಂಸ್ಕೃತಿಕ ಸಂಪನ್ನತೆಯ ಕಲೆ ಯಕ್ಷಗಾನ: ಪ್ರದೀಪ್ ಕಲ್ಕೂರ...
ಮಂಗಳೂರು: ‘ಯಕ್ಷಗಾನವು ಮನುಷ್ಯ ಜೀವನದ ಮೌಲ್ಯ ಪ್ರತಿಪಾದನೆ ಜೊತೆಗೆ ಪುರಾಣ ಪಾತ್ರಗಳ ತತ್ವಾದರ್ಶಗಳನ್ನು ಪರಿಚಯಿಸುತ್ತದೆ. ಅಲ್ಲದೆ ಮನೋರಂಜನೆಯನ್ನೂ ಒದಗಿಸುವುದರಿಂದ ಅದು ಸಾಂಸ್ಕೃತಿಕ ಸಂಪನ್ನತೆಯ ಕಲೆ. ಅದಕ್ಕಾಗಿ ದುಡಿದ ಹಿರಿಯರು ಸದಾ ಸ್ಮರಣೀಯರು’ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದ್ದಾರೆ.
ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2023’ ಹನ್ನೊಂದನೇ ವರ್ಷದ ನುಡಿ ಹಬ್ಬದಲ್ಲಿ ನವೆಂಬರ್ 23 ರಂದು ಕೀರ್ತಿಶೇಷ ಅರ್ಥಧಾರಿಗಳಾದ ಪರಂಗಿಪೇಟೆಯ ಎ.ಕೆ. ನಾರಾಯಣಶೆಟ್ಟಿ ಮತ್ತು ಎ.ಕೆ. ಮಹಾಬಲ ಶೆಟ್ಟಿ ಅವರ ಸಂಸ್ಮರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹೇಶ್ ಮೋಟರ್ಸ್ ಮಾಲಕ ಎ.ಕೆ. ಜಯರಾಮ ಶೇಖ ಅವರು ಸಂಸ್ಮರಣ ಜ್ಯೋತಿ ಬೆಳಗಿ ನುಡಿ ನಮನ ಸಲ್ಲಿಸಿದರು.
ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಕೋಡಿಕಲ್ ಶ್ರೀ ಕುರು ಆಂಬಾ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಹಾಬಲ ಚೌಟ, ಬ್ರಿಟಿಷ್ ಬಯಾಲಾಜಿಕಲ್ ಸಂಸ್ಥೆಯ ಸಿ.ಎಸ್. ಭಂಡಾರಿ ಇರಾ, ಖ್ಯಾತ ಭಾಗವತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಸಾರಿಗೆ ಉದ್ಯಮಿ ಅಡ್ಯಾರ್ ಮಾಧವ ನಾಯಕ್, ದಿ. ಎ.ಕೆ. ನಾರಾಯಣ ಶೆಟ್ಟರ ಸುಪುತ್ರ ಎ.ಕೆ. ಶ್ರೀನಾಥ್ ಶೆಟ್ಟಿ ಮತ್ತು ದಿ. ಎ.ಕೆ. ಮಹಾಬಲ ಶೆಟ್ಟರ ಮಗ ಎ.ಕೆ.ರಮಾನಂದ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ನಿರೂಪಿಸಿದರು. ಸಂಚಾಲಕ ಕರುಣಾಕರ ಶೆಟ್ಟಿ ಪಣಿಯೂರು ವಂದಿಸಿದರು. ಯಕ್ಷಾಂಗಣದ ಪದಾಧಿಕಾರಿಗಳಾದ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ರವೀಂದ್ರ ರೈ ಕಳ್ಳಿಮಾರು, ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಉಮೇಶ ಆಚಾರ್ ಗೇರುಕಟ್ಟೆ, ನಿವೇದಿತ ಎನ್. ಶೆಟ್ಟಿ, ಸುಮಾಪ್ರಸಾದ್ ಉಪಸ್ಥಿತ ರಿದ್ದರು.
‘ಅಜಾಮಿಳ ಚರಿತ್ರೆ’ ತಾಳಮದ್ದಳೆ:
ಯಕ್ಷಗಾನ ತಾಳಮದ್ದಳೆ ಸಪ್ತಾಹದ ಐದನೇ ದಿನ ‘ಶ್ರೀಹರಿ ಚರಿತ್ರೆ’ ಸರಣಿಯಲ್ಲಿ ಪಟ್ಲ ಸತೀಶ್ ಶೆಟ್ಟಿ ಮತ್ತು ಡಾ. ಪ್ರಖ್ಯಾತ್ ಶೆಟ್ಟಿ ಅವರ ಭಾಗವತಿಕೆಯಲ್ಲಿ ‘ಅಜಾಮಿಳ ಚರಿತ್ರೆ’ ತಾಳಮದ್ದಳೆ ಜರಗಿತು.