ಮಾಣಿಯಲ್ಲಿ ವನಮಹೋತ್ಸವ ಹಾಗೂ ಸಸಿ ವಿತರಣಾ ಕಾರ್ಯಕ್ರಮ…
ಲಯನ್ಸ್ ಕ್ಲಬ್ ಮಾಣಿ ವತಿಯಿಂದ ಸಸಿ ವಿತರಣೆ...

ವಿಟ್ಲ ಆ. 13:ಲಯನ್ಸ್ ಕ್ಲಬ್ ಮಾಣಿ ಮತ್ತು ಅರಣ್ಯ ಇಲಾಖೆ ಬಂಟ್ವಾಳ ವಲಯದ ಸಹಯೋಗದೊಂದಿಗೆ ಹಿರಿಯ ಪ್ರಾಥಮಿಕ ಶಾಲೆ ಮಾಣಿ ಮತ್ತು ಬಾಲವಿಕಾಸ ಆಂಗ್ಲಮಾದ್ಯಮ ಶಾಲೆಯ ಪರಿಸರದಲ್ಲಿ ಮಾವು , ಹಲಸು, ಪೇರಳೆ ಮೊದಲಾದ ವಿವಿಧ ಜಾತಿಯ ಹಣ್ಣುಗಳ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಮಾಣಿ ಲಯನ್ಸ್ ಕ್ಲಬ್ ವತಿಯಿಂದ ನೆರವೇರಿಸಲಾಯಿತು.
ವಲಯ ಅರಣ್ಯಾಧಿಕಾರಿ ಸುನಿಲ್ ಡಿಸೋಜ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಗ್ರಾ.ಪಂ. ಅಧ್ಯಕ್ಷ ಸುದೀಪ್ ಶೆಟ್ಟಿ, ಸದಸ್ಯರಾದ ಮೆಲ್ವಿನ್ ಮಾರ್ಟಿಸ್ , ನಾರಾಯಣ ಶೆಟ್ಟಿ, ಹಾಗೂ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಜಡ್ತಿಲ ಪ್ರಹ್ಲಾದ ಶೆಟ್ಟಿ , ಶಿಕ್ಷಕರಾದ ಸುಪ್ರೀಯ ಡಿ., ದಿನಕರ ಪೂಜಾರಿ,ಚಂದ್ರಾವತಿ , ಕುಶಾಲಪ್ಪ ಗೌಡ, ಲಯನ್ಸ್ ಕ್ಲಬ್ ಅಧ್ಯಕ್ಷ ಜನಾರ್ದನ ಪೆರಾಜೆ , ರತ್ನಾಕರ ರೈ, ರಾಜೇಶ್ ಶೆಟ್ಟಿ , ವಿನ್ಸೆಂಟ್ ಲಸ್ರಾದೋ , ಲಯನ್ಸ್ ಕ್ಲಬ್ ಸದಸ್ಯರಾದ ಉಮೇಶ್ ಬರಿಮಾರು, ಬಾಲಕೃಷ್ಣ ಶೆಟ್ಟಿ ಪಾಂಡಿಬೆಟ್ಟು, ಕೂಸಪ್ಪ ಪೂಜಾರಿ , ಉಮೇಶ್ ಅಶ್ವತಡಿ, ಜಯಾನಂದ ಪೆರಾಜೆ ಮೊದಲಾದವರು ಉಪಸ್ಥಿತರಿದ್ದರು.