ಸ್ವಾತಂತ್ರೋತ್ಸವದ ಅಂಗವಾಗಿ ಸರಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ…

ಬಂಟ್ವಾಳ ಆ.13 :ಬಂಟ್ವಾಳ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಸ್ವಾತಂತ್ರೋತ್ಸವದ ಅಂಗವಾಗಿ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮ ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ಬಂಟ್ವಾಳ ನೇತ್ರಾವತಿ ಸಂಗಮದ ವತಿಯಿಂದ ನೆರವೇರಿತು.
ಎಸ್.ಸಿ.ಐ ಅಧ್ಯಕ್ಷ ಟಿ. ತಾರನಾಥ ಕೊಟ್ಟಾರಿ ನೇತೃತ್ವದಲ್ಲಿ ವಕೀಲ ರವೀಂದ್ರ ಕುಕ್ಕಾಜೆ ಸಂಯೋಜಕತ್ವದಲ್ಲಿ ಹಣ್ಣು ಹಂಪಲು ವಿತರಿಸಲಾಯಿತು. ಬಂಟ್ವಾಳ ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಸಂದೀಪ್ ಶೆಟ್ಟಿ, ವೈದ್ಯಾಧಿಕಾರಿ ಪುಷ್ಪಲತಾ , ಉಪನ್ಯಾಸಕ ಜಯಾನಂದ ಪೆರಾಜೆ ,ಎಸ್.ಸಿ.ಐ ಪದಾಧಿಕಾರಿಗಳಾದ ಶೈಲಜಾ ರಾಜೇಶ್, ಸನ್ಮತಿ ಜೈನ್, ರೇಖಾ ರಾವ್, ಜಯ ಗಣೇಶ ಮೊದಲಾದವರು ಪಾಲ್ಗೊಂಡರು.