ಸುದ್ದಿ

ಬಂಟ್ವಾಳ ನೇತ್ರಾವತಿ ಸಂಗಮ ಸ್ಥಾಪಕ ಅಧ್ಯಕ್ಷರಾಗಿ ಜಯಾನಂದ ಪೆರಾಜೆ…

ಬಂಟ್ವಾಳ: ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಇದರ ಬಂಟ್ವಾಳ ನೇತ್ರಾವತಿ ಸಂಗಮ ಘಟಕದ ಸ್ಥಾಪಕ ಅಧ್ಯಕ್ಷರಾಗಿ ಹಿರಿಯ ಜೇಸಿ, ಮಾಜಿ ವಲಯಾಧಿಕಾರಿ, ರಾಜ್ಯ ತರಬೇತುದಾರ ಜಯಾನಂದ ಪೆರಾಜೆ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಜೋಡುಮಾರ್ಗ ಜೆಸಿಐ ನ ಮಾಜಿ ಅಧ್ಯಕ್ಷ ಸತ್ಯನಾರಾಯಣ ರಾವ್ ಮತ್ತು ಕೋಶಾಧಿಕಾರಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯ ಮಾಜಿ ಜೇಸಿಐ ವಲಯಾಧಿಕಾರಿ ಬಿ.ರಾಮಚಂದ್ರ ರಾವ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಸುಬ್ರಾಯ ಆರ್. ಪಟವರ್ಧನ್ , ಜತೆ ಕಾರ್ಯದರ್ಶಿಯಾಗಿ ಜೋಡುಮಾರ್ಗ ಜೆಸಿಐ ಮಾಜಿ ಅಧ್ಯಕ್ಷ ಮಹಮ್ಮದ್ ಪಿ. ಆಯ್ಕೆಯಾಗಿದ್ದಾರೆ
ವಿವಿಧ ಪದಾಧಿಕಾರಿಗಳಾಗಿ ಹಿರಿಯ ಜೇಸಿ ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್, ಉದ್ಯಮಿ ಅಹಮ್ಮದ್ ಮುಸ್ತಾಫ, ಹರ್ಷರಾಜ್, ಪಿ.ಎ.ರಹೀಂ, ತೋಮಸ್ ಡಿಕೋಸ್ಟ, ಹರಿಶ್ಚಂದ್ರ ಆಳ್ವ, ಮಲ್ಲಿಕಾ ಆಳ್ವ, ಶೈಲಜಾ ರಾಜೇಶ್, ಧಮೇಂದ್ರ ಚಂದ್ರವಿಲಾಸ , ಸುಲೈಮಾನ್, ಬಂಟ್ವಾಳ ಜೆಸಿಐನ ಮಾಜಿ ನಿಟಕಪೂರ್ವ ಅಧ್ಯಕ್ಷ ಉಮೇಶ ಮೂಲ್ಯ, ಮಾಜಿ ಅಧ್ಯಕ್ಷ ನಾಗೇಶ ಬಾಳೆಹಿತ್ಲು, ಉದ್ಯಮಿ ಸದಾನಂದ ಬಂಗೇರ ಆಯ್ಕೆಯಾಗಿದ್ದಾರೆ.

 

Advertisement

Related Articles

Back to top button