ಗಾಂಧಿನಗರದಲ್ಲಿ ಬೃಹತ್ ಸೌಹಾರ್ದ ಇಫ್ತಾರ್ ಸಂಗಮ…

ಸುಳ್ಯ: ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ, ಕೆರೆಮೂಲೆ ವಾರ್ಡ್ ಹಾಲಿ ಸದಸ್ಯ ಎಂ. ವೆಂಕಪ್ಪ ಗೌಡ ರ ವತಿಯಿಂದ ಗಾಂಧಿನಗರ ಮದ್ರಸ ವಠಾರ ದಲ್ಲಿ ಬೃಹತ್ ಸೌಹಾರ್ದ ಇಫ್ತಾರ್ ಸoಗಮ ಏರ್ಪಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೆಂಕಪ್ಪ ಗೌಡ ಶಾಂತಿ, ಸೌಹಾರ್ದತೆ ಸಾಮರಸ್ಯ ದಿಂದ ನೆಮ್ಮದಿಯ ಬದುಕು ಸಾಧ್ಯ, ಮಾನವೀಯತೆ ಸಂದೇಶ ಸಾರುವ ಪವಿತ್ರ ರಂಜಾನ್ ವೃತಾಚರಣೆ ಮತ್ತು ಇಫ್ತಾರ್ ಸಂಗಮ ದ ಪಾವಿತ್ರ್ಯತೆ ಅಗಾಧ ವಾದದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ, ಗಾಂಧಿನಗರ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಎoಎಸ್ ಮಹಮ್ಮದ್, ನಗರ ಪಂಚಾಯತ್ ಸದಸ್ಯರು ಗಳಾದ ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್, ಸಿದ್ದಿಕ್ ಕೋಕ್ಕೊ, ಕೆರೆಮೂಲೆ ಬೂತ್ ಸಮಿತಿ ಅಧ್ಯಕ್ಷ ಶಹೀದ್ ಪಾರೆ,ಅನ್ಸಾರ್ ಅಧ್ಯಕ್ಷ ಹಾಜಿ ಎಸ್ ಅಬ್ದುಲ್ಲ ಕಟ್ಟೆಕ್ಕಾರ್ಸ್, ಇಫ್ತಾರ್ ಸಮಿತಿಯ ಎನ್ ಎ. ಜುನೈದ್, ರಫೀಕ್ ಮೊದಲಾದವರು ಉಪಸ್ಥಿತರಿದ್ದರು.