ಕೇರಳ ರಾಜ್ಯ ಲಾಟರಿಯ ತಿರುವೋಣಂ ಬಂಪರ್ ಡ್ರಾ- 6 ಮಂದಿಗೆ 12 ಕೋಟಿ ರೂ…..

ಕಾಸರಗೋಡು: ಕಾತರದಿಂದ ನಿರೀಕ್ಷಿಸುತ್ತಿದ್ದ ಕೇರಳ ರಾಜ್ಯ ಲಾಟರಿಯ ತಿರುವೋಣಂ ಬಂಪರ್ ಡ್ರಾ ಗುರುವಾರ ನಡೆದಿದ್ದು, ಪ್ರಥಮ ಬಹುಮಾನ 12 ಕೋಟಿ ರೂ. ಚಿನ್ನದ ಮಳಿಗೆಯೊಂದರ 6 ಮಂದಿ ಸಿಬ್ಬಂದಿಗಳ ಪಾಲಾಗಿದೆ.
ಮಳಿಗೆ ಸಿಬ್ಬಂದಿ ಸುಬಿನ್, ರೆಂಜಿನ್, ರೋನಿ, ವಿವೇಕ್, ರತೀಶ್, ಹಾಗೂ ರಾಜೀವನ್ ಎಂಬವರು ಟಿ.ಎಂ. 160869 ಎಂಬ ನಂಬರ್‌ನ ಟಿಕೆಟನ್ನು ಜೊತೆಯಾಗಿ ಖರೀದಿಸಿದ್ದರು.
ಆಲೆಪ್ಪಿ ಜಿಲ್ಲೆಯ ಕಾಯಂಕುಳಂನ ಶ್ರೀಮುರುಗಾ ಲಾಟರೀಸ್‌ನ ಶಿವನ್‌ಕುಟ್ಟಿ ಮಾರಾಟ ಮಾಡಿದ ಟಿಕೆಟ್‌ಗೆ ಈ ಅದೃಷ್ಟ ಒಲಿದು ಬಂದಿದೆ. ಪ್ರಥಮ ಬಹುಮಾನ ಪಡೆದವರಿಗೆ ಏಜೆಂಟ್ ಕಮಿಷನ್, ತೆರಿಗೆ ಕಡಿತಗೊಂಡು 7.56 ಕೋಟಿ ರೂ. ಸಿಗಲಿದೆ. ಎರಡನೇ ಬಹುಮಾನ ತಲಾ 50 ಲಕ್ಷ ರೂ.ನಂತೆ 10 ಮಂದಿಗೆ ಲಭಿಸಿದೆ.
ಪ್ರತೀ ಟಿಕೆಟ್ 300 ರೂ. ಬೆಲೆ ಹೊಂದಿದ್ದು, 46 ಲಕ್ಷ ಟಿಕೆಟ್ ಮುದ್ರಿಸಲಾಗಿತ್ತು. ಒಟ್ಟು ಹತ್ತು ಸೀರಿಯಲ್‌ಗಳಲ್ಲಾಗಿ ಟಿಕೆಟ್ ಮುದ್ರಿಸಲಾಗಿದ್ದು, ಬಂಪರ್ ಬಹುಮಾನ ಹೊಂದಿದ ನಂಬರ್ ಒಳಗೊಂಡ ಬೇರೆ ಸೀರಿಯಲ್‌ಗಳಿಗೆ ತಲಾ ಐದು ಲಕ್ಷ ರೂ. ಬಹುಮಾನವಿರಲಿದೆ.

Onamlottery 300x125

Related Articles

Leave a Reply

Your email address will not be published. Required fields are marked *