ಹಿರಿಯ ಸಾಹಿತಿ ಹಾ.ಮ.ಸತೀಶರಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿ…

ಬೆಂಗಳೂರು: ಕವಿ ಹಾ. ಮ.ಸತೀಶ ಬೆಂಗಳೂರು ಇವರಿಗೆ , ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕನ್ನಡ ಭವನದ ಪ್ರತಿಷ್ಠಿತ ಅಂತಾರಾಜ್ಯ ಪ್ರಶಸ್ತಿಯಾದ ಕನ್ನಡ ಪಯಸ್ವಿನಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು‌.
ಶ್ರೀ ಸರಸ್ವತಿ ಎಜುಕೇಷನ್, ಮಕ್ಕಳ ಸಾಹಿತ್ಯ ಮಾಸಿಕ ತೊದಲ್ನುಡಿ ಚಿಣ್ಣರಿಗೊಂದು ನಲ್ನುಡಿ, ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ) ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಕಾಸರಗೋಡು ಸಂಯುಕ್ತ ಆಶ್ರಯದಲ್ಲಿ ಕೇರಳ – ಕರ್ನಾಟಕ ಕನ್ನಡ ನುಡಿ ಸಂಭ್ರಮ ಪ್ರಶಸ್ತಿ ಪ್ರದಾನ ಮತ್ತು ಚುಟುಕು ಕವಿ ಕಾವ್ಯ ಸಂಗಮ ಈ ಕಾರ್ಯಕ್ರಮ ೨೦ ಜುಲೈ ೨೦೨೫/ಭಾನುವಾರದಂದು ಶ್ರೀ ಸರಸ್ವತಿ ಎಜುಕೇಷನ್ ಟ್ರಸ್ಟ್ ಆವರಣ ವೈಟ್ ಫೀಲ್ಡ್, ಬೆಂಗಳೂರು ಇಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಸಾಹಿತಿ ಹಾ.ಮ ಸತೀಶ ಬೆಂಗಳೂರು ಇವರಿಗೆ ಅಂತಾರಾಜ್ಯ ಪ್ರಶಸ್ತಿಯಾದ ಕನ್ನಡ ಪಯಸ್ವಿನಿ ಪ್ರಶಸ್ತಿ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು.

Sponsors

Related Articles

Back to top button