ಶ್ರೀ ಅಮೃತ ಸೋಮೇಶ್ವರರಿಗೆ ಸನ್ಮಾನ…
ಮಂಗಳೂರು: ಕೋಟೆಕಾರಿನ ಒಲುಮೆ ನಿವಾಸದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ವತಿಯಿಂದ ಜಾನಪದ ವಿದ್ವಾಂಸ ಪ್ರೊ. ಅಮೃತ ಸೋಮೇಶ್ವರ ಇವರನ್ನು ಗೌರವಿಸಲಾಯಿತು.
ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ. ಎ.ವಿ. ನಾರಾಯಣ, ಅಧ್ಯಕ್ಷ ಕೈಯೂರು ನಾರಾಯಣ ಭಟ್ಟ, ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಟ್ರಸ್ಟಿಗಳಾದ ಭಾಸ್ಕರ ಬಾರ್ಯ, ದುಗ್ಗಪ್ಪ ಎನ್, ಡಾ. ಬಿ.ಎನ್ ಮಹಾಲಿಂಗ ಭಟ್, ಜಯರಾಮ ಭಂಡಾರಿ ಧರ್ಮಸ್ಥಳ, ತಾಲೂಕು ಸಂಚಾಲಕರಾದ ವಸಂತ ಸುವರ್ಣ ಬೆಳ್ತಂಗಡಿ, ಬಾಲಚಂದ್ರ ಶೆಟ್ಟಿ ಸೋಮೇಶ್ವರ, ಸಂತೋಷ ಕಾವೂರು, ಉದಯಶಂಕರ ರೈ ಪುಣಚ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಉದ್ದೇಶಗಳ ಬಗ್ಗೆ ತಿಳಿದುಕೊಂಡ ಅಮೃತ ಸೋಮೇಶ್ವರ ಮಾತನಾಡಿ ಉತ್ತಮ ಚಿಂತನೆಯಿಂದ ಕೂಡಿದ ಕಾರ್ಯಗಳಿಗೆ ಸರ್ವರ ಸಹಕಾರ ಲಭಿಸಲಿ ಎಂದು ತಿಳಿಸಿದರು.
ದಿನ ನಿತ್ಯವೂ ಸಾಹಿತ್ಯ ರಚನೆಯ ಕಾರ್ಯದಲ್ಲಿ ತೊಡಗಿಸಿ ಕೊಂಡಿರುವುದಾಗಿ ತಿಳಿಸಿ, ನನ್ನಿಂದ ರಚಿಸಲ್ಪಟ್ಟ ಎಲ್ಲಾ ಯಕ್ಷಗಾನ ಪ್ರಸಂಗಗಳು ಯಶಸ್ವಿಯಾಗಿ ಪ್ರದರ್ಶನಗೊಳ್ಳಲು ಕಲಾವಿದರ ಶ್ರಮವು ಮುಖ್ಯವಾಗಿತ್ತು ಎಂಬುದನ್ನು ಸ್ಮರಿಸಿಕೊಂಡರು. ಅಮೃತರ ಪತ್ನಿ ನರ್ಮದ, ಪುತ್ರ ಜೀವನ್ ಮತ್ತು ಸೊಸೆ ಸತ್ಯವತಿ ಪ್ರತಿಷ್ಠಾನದ ಪದಾಧಿಕಾರಿಗಳನ್ನು ಸತ್ಕರಿಸಿದರು.