ನವರಾತ್ರಿ ಪ್ರಯುಕ್ತ ಮೂಡುಬಿದಿರೆಯ ವಿವಿಧ ಬಸದಿ, ಮಠಗಳಲ್ಲಿ ವಿಶೇಷ ಪೂಜೆ…

ಮೂಡುಬಿದಿರೆ:ನವರಾತ್ರಿ ಪ್ರಯುಕ್ತ ಜೈನ ಕಾಶಿ ಮೂಡುಬಿದಿರೆಯ ಬೆಂಕಿ ಬಸದಿ, ಲೆಪ್ಪದ ಬಸದಿ, ಶ್ರೀ ದಿಗಂಬರ ಜೈನ ಮಠದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.
ಪ್ರತಿ ವರ್ಷದಂತೆ ಜೀವ ದಯಾ ಅಷ್ಟಮಿ ಮೂಡು ಬಿದಿರೆ ಯಲ್ಲಿ ಬಹಳ ವಿಜೃಂಭಣೆ ಯಿಂದ ನೆರವೇರುತ್ತದೆ. ಈ ಬಾರಿ 11.10.24 ಶುಕ್ರವಾರ ಬೆಳಿಗ್ಗೆ 6.00ರಿಂದ ಮೂಡು ಬಿದಿರೆ ಶ್ರೀ ಶ್ರೀ ಗಳಿಂದ 18ಬಸದಿ ದರ್ಶನ 8ಗಂಟೆ ಗೆ ಶ್ರೀ ಮಠದಲ್ಲಿ ಕ್ಷೀರ ಅಭಿಷೇಕ ಶ್ರೀ ಗಳಿಂದ ದಶ ಭಕ್ತಿ ಹಾಗೂ ಸಂಕ್ಷಿಪ್ತ ಜೈನ ಧರ್ಮ ಎಂಬ ಶಾಸ್ಟ ದಾನ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ) ಪ್ರಕಾಶಿತ ಗ್ರಂಥ ಬಿಡುಗಡೆಗೊಳಿಸಿ ಮನುಷ್ಯನಿಗೆ ಮನಸು ವಚನ ಕಾಯದ ವಿವಿಧ ಪ್ರವೃತ್ತಿ ಗಳಿಂದ ಬರುವ ಕರ್ಮಗಳನ್ನು ನಿಲ್ಲಿಸಲು ದೇವರ ಪೂಜೆ ಗುರುಗಳ ವಿನಯ ಭಕ್ತಿ ಶಾಸ್ತ್ರ ಸ್ವಾಧ್ಯಯ, ಸoಯಮ ತಪಸ್ಸಿನಿಂದ ಸಾಧ್ಯ ಸಕಲ ಜೀವಿಗಳ ಬಗೆಗಿನ ದಯೆ ಬದುಕು ಬದುಕಲು ಬಿಡು ಅನ್ನುವ ಸರ್ವಾನುಕಂಪ ಜೀವಿಗಳ ನಿರ್ಭಯ ಶಾಂತಿ ಯ ಜೀವನಕ್ಕೆ ನಾಂದಿ ಎಂದು ನುಡಿದರು. ಬೆಳಿಗ್ಗೆ 11ರಿಂದ ಸಾಮೂಹಿಕ ಶುದ್ಧ ಭೋಜನ ವ್ಯವಸ್ಥೆ ಮಹಾವೀರ ಭವನ ದಲ್ಲಿ ಶ್ರೀ ಮಠದಿಂದ ದಾನಿಗಳ ಸಹಕಾರದಿಂದ ಮಾಡಲಾಗಿತ್ತು ಹಾಗೂ ಅಪ ರಾಹ್ನ 3.00 ಸಾವಿರ ಕಂಬ ಬಸದಿ ಸಿದ್ದಕೂಟದಲ್ಲಿ ಸರ್ವಪೂಜೆ, ಸಂಜೆ 4.00 ಗಂಟೆಗೆ ಗುರು ಬಸದಿ ಕ್ಷೀರ ಅಭಿಷೇಕ 5.00ಗಂಟೆ ಗೆ ಲೆಪ್ಪದ ಬಸದಿ ಕ್ಷೀರ ಅಭಿಷೇಕ,ಸಂಜೆ 7.00ಗಂಟೆಗೆ ಸರಸ್ವತಿ ಪೂಜೆ ಬೆಂಕಿ ಬಸದಿ ಜರುಗಿತು. ಮಧ್ಯ ಪ್ರದೇಶ, ರಾಜ ಸ್ಥಾನ ಚತ್ತಿಸ್ ಘಡ, ಮಹಾರಾಷ್ಟ್ರ, ಹರ್ಯಾಣ ದೆಹಲಿ ಕರ್ನಾಟಕ, ಕೇರಳ ವಿವಿಧ ಪ್ರಾಂತ್ಯ ಗಳಿಂದ ಸಹಸ್ರಾರು ಜನ ಶ್ರದ್ದಾ ಭಕ್ತಿ ಯಿಂದ ಬೆಳಿಗ್ಗೆ 6ಗಂಟೆ ಯಿಂದ ಜೈನ ಕಾಶಿ ಬಸದಿ, ಶಾಸ್ತ್ರ, ಗುರು ಗಳ ದರ್ಶನ ಮಾಡಿದರು. ಬಸದಿ ಮುಕ್ತೇಸರ ಪಟ್ಣ ಶೆಟ್ಟಿ ಸುಧೀಶ್ ಕುಮಾರ್, ಸುದೇಶ್ , ಆದರ್ಶ್, ಕೆಪಿ ಜಗದೀಶ್ ಅಧಿಕಾರಿ ಶ್ರೀ ನಾಥ್ ಬಲ್ಲಾಳ್,ಬಾಹುಬಲಿ ಪ್ರಸಾದ್, ಡಾ ಎಸ್ ಪಿ ವಿದ್ಯಾ ಕುಮಾರ್ ಶುಭಾಶ್ಚಂದ್ರ ಬೆಳ್ತಂಗಡಿ,ರಂಜಿತ್, ಶ್ವೇತಾ ಜೈನ್ ವಕೀಲರು ಉಪಸ್ಥಿತರಿದ್ದರು.

whatsapp image 2024 10 11 at 10.22.42 pm

Sponsors

Related Articles

Back to top button