ಏ. 9 ರಿಂದ 14 – ಮೀರಾಯ ಇವೆಂಟ್ಸ್ ವತಿಯಿಂದ ಜಾಗತಿಕ ಸಾಂಸ್ಕೃತಿಕ ಕಾರ್ಯಕ್ರಮ…
ಬೆಂಗಳೂರು:ಬೆಂಗಳೂರಿನ ಮೀರಾಯ ಇವೆಂಟ್ಸ್ ವತಿಯಿಂದ 2025 ಏಪ್ರಿಲ್ 9 ರಿಂದ 14 ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಜಾಗತಿಕ ಸಾಂಸ್ಕೃತಿಕ ಕಾರ್ಯಕ್ರಮದ ರೂಪ ರೇಖೆಗಳ ಬಗ್ಗೆ ಪ್ರವಾಸೋದ್ಯಮ ಸಚಿವ ಶ್ರೀ ಹೆಚ್ ಕೆ ಪಾಟೀಲ್ ಅವರೊಂದಿಗೆ ವಿಧಾನ ಸೌಧದಲ್ಲಿ ಇಂದು ಮೀರಾಯ ಇವೆಂಟ್ಸ್ ತಂಡದೊಂದಿಗೆ ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಚರ್ಚಿಸಿದರು.
ಐದು ದಿನ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು ಐದು ಲಕ್ಷ ಜನ ವಿವಿಧ ದಿವಸಗಳಲ್ಲಿ ಭಾಗವಹಿಸಲಿದ್ದು ಪ್ರವಾಸೋದ್ಯಮ ಹಾಗು ವಿದೇಶಿ ಬಂಡವಾಳ ಬೆಂಗಳೂರಿಗೆ ಹರಿದು ಬರಲಿದ್ದು,ಮೀರಾಯ ಇವೆಂಟ್ಸ್ ವ್ಯವಸ್ಥಾಪಕ ನಿರ್ದೇಶಕಿ ಜಯಶ್ರೀ ಕೂನ್ತುಲ್ಲಿ, ಟರ್ಕಿ ದೇಶದ ಪ್ರತಿನಿಧಿ ಹಲೀಮಾ ತಸ್ತಾನ್ ಟೆಸಬಿಲೆಕ್, ಸಲ್ಮಾನ್ ಮುಜೀರ್, ಅಮ್ಜದ್ ಖಾನ್ ಮಾದಲಾದವರು ಸಚಿವರೊಂದಿಗೆ ವಿಚಾರವಿನಿಮಯ ಮಾಡಿದರು, ಸರಕಾರದ ಮತ್ತು ಪ್ರವಾಸೋದ್ಯಮದ ಇಲಾಖೆಯ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಸಚಿವರುಈ ಸಂದರ್ಭದಲ್ಲಿ ಭರವಸೆ ನೀಡಿದರು.